ಬುಧವಾರ, ನವೆಂಬರ್ 20, 2019
21 °C

`ಮತಯಾಚನೆಗೆ ಜಾತಿ ಪ್ರಸ್ತಾಪ ಬೇಡ'

Published:
Updated:

ಹುಮನಾಬಾದ್: `ಮತಯಾಚನೆ ಸಂದರ್ಭದಲ್ಲಿ ಮತದಾರರಲ್ಲಿ ಹಿಂದೂ- ಮುಸ್ಲಿಂ ಎಂದು ಧರ್ಮ ಬೆರೆಸುವುದು ತರವಲ್ಲ' ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಜಮೀರ್ ಪಾಷಾ ತಿಳಿಸಿದರು.ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  `ಕಾಂಗ್ರೆಸ್ ಜಾತ್ಯತೀತ ನಿಲುವಿನ ಪಕ್ಷ. ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಕೇವಲ ಕಾಂಗ್ರೆಸ್‌ನಿಂದ ಸಾಧ್ಯ' ಎಂದು ಪ್ರತಿಪಾದಿಸಿದರು.`ಅಮೂಲ್ಯವಾದ ಮತ ಹಣ ಮತ್ತು ಹೆಂಡಕ್ಕೆ ಮಾರಿಕೊಂಡು ವ್ಯರ್ಥವಾಗಿಸಬಾರದು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು' ಎಂದು ಮನವಿ ಮಾಡಿದರು. ಅಭ್ಯರ್ಥಿ ರಾಜಶೇಖರ ಬಿ.ಪಾಟೀಲ ಅವರು ಜೆಡಿಎಸ್ ಅಭ್ಯರ್ಥಿ ನಸೀಮೋದ್ದೀನ್ ಪಟೇಲ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಹಿರಿಯ ವಕೀಲ ವಾಜೀದ್ ಖಮರ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಶರಣಪ್ಪಗೌಡ ಎನ್.ಪಾಟೀಲ, ನಾರಾಯಣರೆಡ್ಡಿ ಮಂಗಲಗಿ, ನೂರ್ ಕಲೀಂಸಾಬ್, ಮಹ್ಮದ್ ಸಮದ್, ಎಸ್.ಎ ಬಾಸೀತ್ ಓಮರ್, ತಾಹೇರ್ ಔರಂಗಾಬಾದಿ, ರಹೀಂಖಾನ್, ನಯುಮ್ ಬಾಗವಾನ್, ಅಸ್ಲಾಂ ಬಾಬಾ, ಪ್ರಕಾಶ ಕಾಡಗೊಂಡ, ಪಾಂಡುರಂಗ ಖಂಡಗೊಂಡ, ರಾಜಪ್ಪ ಇಟಗಿ, ಸಮೀರ್ ಪಾಷಾ, ವಿನಾಯಕ ಯಾದವ್ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ ನಿರೂಪಿಸಿದರು.

ಪ್ರತಿಕ್ರಿಯಿಸಿ (+)