ಮತಾಂತರಕ್ಕೆ ಬಲಿಯಾಗಬೇಡಿ: ಆಂದೋಲಾ ಶ್ರೀ

6

ಮತಾಂತರಕ್ಕೆ ಬಲಿಯಾಗಬೇಡಿ: ಆಂದೋಲಾ ಶ್ರೀ

Published:
Updated:

ಚಿಂಚೋಳಿ: ದೇಶದಲ್ಲಿ ಮತಾಂಧ ಶಕ್ತಿಗಳು ಲವ್ ಜಿಹಾದ್ ಹೆಸರಲ್ಲಿ ಹಿಂದೂ ಹುಡುಗಿಯರನ್ನು ನಂಬಿಸಿ ಮೋಸ ಮಾಡಲು ಷಡ್ಯಂತ್ರ ರೂಪಿಸಿವೆ. ಈ ಕುರಿತು ಹಿಂದೂ ಯುವತಿಯರು ಎಚ್ಚರಿಕೆ ವಹಿಸದೇ ಹೋದರೆ ಜೀವನವಿಡಿ ನರಕದಲ್ಲಿ ಕಳೆಯಬೇಕಾಗುತ್ತದೆ ಎಂದು ಆಂದೋಲಾದ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರು ಎಚ್ಚರಿಕೆ ನೀಡಿದರು.ಅವರು ತಾಲ್ಲೂಕಿನ ನಿಡಗುಂದಾ ಗ್ರಾಮದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಕಾರ್ತಿಕ ದೀಪೋತ್ಸವದ ಸಮಾರೋಪ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.ಮತಾಂಧ ಸಂಘಟನೆಗಳು ತಮ್ಮ ಯುವಕರಿಗೆ ಲಕ್ಷಾಂತರ ರೂ.ಗಳು ನೀಡಿ, ಹಿಂದೂ ಯುವತಿಯರನ್ನು ಪ್ರೀತಿಯ ಮೋಡಿಗೆ ಹಾಕಿಕೊಳ್ಳಲು ನೆರವಾಗುತ್ತಿವೆ. ಹೀಗೆ ಪ್ರೀತಿಸಿದ ನಂತರ ಆ ಯುವಕನಿಗೆ ಈಗಾಗಲೇ ಇಬ್ಬರು ಮೂವರು ಪತ್ನಿಯರಿರುವುದು ಗೊತ್ತಾಗುತ್ತಿದೆ. ಇಂತಹ ಸಂಬಂಧದಿಂದ ಹುಟ್ಟಿದ ಮಕ್ಕಳನ್ನೇ ದೇಶವಿರೋಧಿ (ಮಾನವ ಬಾಂಬ್) ಕೃತ್ಯಕ್ಕೆ ಬಳಸುತ್ತಿವೆ ಎಂದು ಶ್ರೀಗಳು ಹೇಳಿ ಎಚ್ಚರಿಕೆಯಿಂದ ಇರಲು ಯುವತಿಯರಿಗೆ ಕರೆ ನೀಡಿದರು.ಹೈದರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂ ಜಾರಿಗೆ ಅವಿರತ ಹೋರಾಟ ನಡೆಸಿದ ಮಾಜಿ ಸಚಿವ ವೈಜನಾಥ ಪಾಟೀಲ ಮತ್ತು ಶ್ರೀಮಠದ ಪರಮ ಭಕ್ತರಾದ ಬಾಬುಕುಂಬಾರ ಹಾಗೂ ಅಂಬುಜಾಕ್ಷಿ ಕುಂಬಾರ ದಂಪತಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ವೈಜನಾಥ ಪಾಟೀಲ ದಶಕದ ಹಿಂದೆ 371 ಬಗ್ಗೆ ಹೇಳಿದರೆ ಕೆಲವರು ವಿರೋಧ ಮಾಡಿದರು ಆದರೆ ಇಂದು ಎಲ್ಲರೂ ಅದರ ಪರವಾಗಿ ನಿಂತಿದ್ದಾರೆ. ನಮಗೆ ಅನ್ಯಾಯವಾಗುತ್ತಿರುವುದು ವಿರೋಧ ಮಾಡುತ್ತಿರುವವರಿಗೆ ತಡವಾಗಿ ಅರಿವಾಗಿದೆ ಎಂದರಲ್ಲದೇ ಪಕ್ಷಭೇಧ ಮರೆತು ಹೋರಾಟ ನಡೆಸಿದ್ದರಿಂದ ಫಲ ಕಂಡಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಖೆಯ ಸಹಾಯಕ ನಿರ್ದೇಶಕ ರುದ್ರಗೌಡ ಪಾಟೀಲ, ಸಾಹಿತಿ ಮುಡುಬಿ ಗುಂಡೇರಾವ್, ಚಿತ್ತಾಪುರ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರಯ್ಯಸ್ವಾಮಿ ಮಾತನಾಡಿದರು. ಬಸವರಾಜ ಕೊರಡಂಪಳ್ಳಿ ಸ್ವಾಗತಿಸಿದರು. ರಾಜಶೇಖರ ಶ್ರೀಗಿರಿ ನಿರೂಪಿಸಿದರು. ಬಿ.ಜಿ ಚಿಕ್ಕಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry