ಮತಾಂತರ, ಗೋಹತ್ಯೆ ನಿಷೇಧ ಅಗತ್ಯ

7

ಮತಾಂತರ, ಗೋಹತ್ಯೆ ನಿಷೇಧ ಅಗತ್ಯ

Published:
Updated:

ಹೊಳೆನರಸೀಪುರ: ಭಯೋತ್ಪಾದನೆ, ಮತಾಂತರ ಹಾಗೂ ಗೋಹತ್ಯೆ ನಿಷೇಧಿಸಬೇಕು ಎನ್ನುವ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ನಿಲುವು ಬದಲಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಸಂತೋಷ್ ನುಡಿದರು.ಪಟ್ಟಣದಲ್ಲಿ ಶನಿವಾರ ನಡೆದ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮಾತ ನಾಡಿದರು. ಶಿಕ್ಷಕರು ಹಾಗೂ ಮಠಾಧೀಶರು ಇಂತಹದ್ದೇ ಜಾತಿ ಅನುಸರಿಸು ಎಂದು ಶಿಷ್ಯರಿಗೆ ಹೇಳುವು ದಿಲ್ಲ.ಆದರೆ, ದೇಶದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆ ನಡೆಸುವ ಅನ್ಯ ಧರ್ಮಗಳು ಮತಾಂತರ, ಭಯೋ ತ್ಪಾದನೆಯಲ್ಲಿ ತೊಡಗಿವೆ. ಆದರೆ, ಆರ್‌ಎಸ್‌ಎಸ್ ಸಾಮಾನ್ಯರನ್ನು ಅಸಮಾನ್ಯರನ್ನಾಗಿಸುವ. ಶಿಸ್ತುಬದ್ಧ ದೇಶ ಸೇವಕರನ್ನು ರೂಪಿಸುವ ಕೆಲಸ ಮಾಡುತ್ತಿದೆ ಎಂದರು.ಸಂಘ ಪ್ರತಿಯೊಬ್ಬರಲ್ಲೂ ರಾಷ್ಟ್ರ ಪ್ರೇಮ ಬೆಳೆಸುವ ಉದ್ದೇಶದಿಂದ ಇಂತಹ ಶಿಕ್ಷಾವರ್ಗಗಳನ್ನು ದೇಶದಾ ದ್ಯಂತ ಯುವಕರಿಗೆ ನಡೆಸುತ್ತಿದೆ ಎಂದು ವಿವರಿಸಿದರು.ಭಾರತ ಮಾತೆ ಬಗ್ಗೆ ಪ್ರತಿಯೊಬ್ಬ ರಲ್ಲೂ ಪೂಜ್ಯ ಭಾವನೆ ಬರಬೇಕು. ನೆಲದ ಸಂಸ್ಕೃತಿ ಪ್ರಜ್ವಲಿಸಬೇಕು. ನಮ್ಮ ಸಂಸ್ಕೃತಿಗೆ ದೇಶದ ಪ್ರತಿಯೊಬ್ಬ ಪ್ರಜೆ ತಲೆಬಾಗಬೇಕು. ಪ್ರತ್ಯೇಕ ಧರ್ಮಾ ನುಸಾರ ಯಾವುದೇ ದೇವರನ್ನು ಪೂಜಿಸಲಿ, ಆದರೆ ದೇಶದ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುವವರನ್ನು ಸಹಿಸಲು ಸಾಧ್ಯವಿಲ್ಲ. ಪರಕೀಯರ ದಾಳಿ ನಂತರವೂ ನಮ್ಮ ದೇಶ ಹಿಂದೂಸ್ತಾನವಾಗಿಯೇ ಉಳಿದಿದೆ. ಇದಕ್ಕೆ ಕಾರಣ ನಮ್ಮಲ್ಲಿ ಬೇರೂರಿರುವ ಹಿಂದುತ್ವದ ಪರಿಣಾಮ ಎಂದರು.ನಮ್ಮನ್ನು ಆಳಿದ ಬ್ರಿಟಿಷ್ ಹಾಗೂ ಮುಸ್ಲಿಮ್ ದೊರೆಗಳ ಬಗ್ಗೆ ಸಾಕಷ್ಟು ತಿಳಿಸಿಕೊಡುವ ಪಠ್ಯಕ್ಕೆ ಒತ್ತು ನೀಡು ತ್ತಿಲ್ಲ.ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ ಅರ ಳಿಸುವ ಶಿಕ್ಷಣ ನೀಡಬೇಕಿದೆ ಎಂದರು.ಅರಕಲಗೂಡು ದೊಡ್ಡ ಮಠದ ಮಲಿಕ್ಲಾರ್ಜುನ ಸ್ವಾಮಿ ಮಾತನಾಡಿ, ಸಂಸ್ಕೃತಿ ಗೌರವಿಸುವ ಎಲ್ಲರು  ರಾಷ್ಟ್ರ ಪ್ರೇಮಿ ಎನಿಸಿಕೊಳ್ಳುತ್ತಾನೆ ಎಂದರು.ಹೊಳೆನರಸೀಪುರ ಶಾಖೆಯ ಮುಖ್ಯಸ್ಥ ಹೊ.ಸು. ರಮೇಶ್, ಬಿಜೆಪಿ ಮುಖಂಡ ಕೆ.ಎಂ. ಶ್ರಿನಿವಾಸ್,ಎಚ್. ಆರ್.ನಾರಾಯಣ್, ಮೈಲಾರಿ, ಎಂ.ಎನ್. ನಟರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry