ಶುಕ್ರವಾರ, ಅಕ್ಟೋಬರ್ 18, 2019
27 °C

ಮತಾಂತರ ತಪ್ಪಲ್ಲ

Published:
Updated:

ತುಮಕೂರಿನಲ್ಲಿ ನಡೆಯುತ್ತಿರುವ ಧನುರ್ಮಾಸ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ರಂಭಾಪುರಿ ಸ್ವಾಮೀಜಿ ಅವರು ಮಡೆಸ್ನಾನ ತಪ್ಪಿಲ್ಲವೆಂದು ಹೇಳಿ ಹಿಂದೂಗಳ ಮತಾಂತರಕ್ಕೆ ವಿಷಾದಿಸಿದ್ದಾರೆ (ಪ್ರವಾ ಜ. 5 ಜೂನ್ 2012).ರಂಭಾಪುರಿ ಶ್ರೀಗಳು ವಿಷಾದಿಸಬೇಕಾಗಿರುವುದು ಮತಾಂತರಕ್ಕೆ ಕಾರಣವಾಗುವ ಸಂಗತಿಗಳೇ ಹೊರತು ಮತಾಂತರವನ್ನಲ್ಲ. ನೆಮ್ಮದಿಯ ಜೀವನ, ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಜನರು ತಮಗೆ ಬೇಕಾದ ಮತ(ಧರ್ಮ)ವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆ. ಅದನ್ನು ತಪ್ಪು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ.ಹಿಂದುಗಳಿಗೆ, ಮೇಲ್ವಗದ ಹಿಂದುಗಳೇ ಮಲ ತಿನ್ನಿಸಿ, ಬೆತ್ತಲೆ ಮೆರವಣಿಗೆ ಮಾಡಿ ಬಹಿಷ್ಕರಿಸುವಂತಹ ವ್ಯವಸ್ಥೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿ ಯಾರಾದರೂ ಮತಾಂತರಕ್ಕೆ ಮುಂದಾದರೆ ಅದು ಹೇಗೆ ತಪ್ಪಾಗುತ್ತದೆ?

 

Post Comments (+)