ಮತೀಯ ಹಿಂಸಾಚಾರ ತಡೆ ಕಾಯ್ದೆ ಅನಾಗರಿಕರ

7

ಮತೀಯ ಹಿಂಸಾಚಾರ ತಡೆ ಕಾಯ್ದೆ ಅನಾಗರಿಕರ

Published:
Updated:

ಬಾಗಲಕೋಟೆ: ಕೇಂದ್ರದ ಯುಪಿಎ ಸರ್ಕಾರ ಜಾರಿಗೊಳಿಸಲು ಉದ್ದೇಶಿ ಸಿರುವ `ಮತೀಯ ಹಿಂಸಾಚಾರ ತಡೆ ಕಾಯ್ದೆ~ ಅನಾಗರಿಕ ಕಾನೂನು ಎಂದು ಆರ್‌ಎಸ್‌ಎಸ್ ದಕ್ಷಿಣ ಕ್ಷೇತ್ರೀಯ ಸಂಪರ್ಕ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್ ಟೀಕಿಸಿದರು.ನಗರದ ಬಿವಿವಿ ಮೈದಾನದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ನಗರ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ಮತೀಯ ಹಿಂಸಾಚಾರ ತಡೆ ಕಾಯ್ದೆ ದೇಶದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಭಾರಿ ಕಂದಕವನ್ನು ನಿರ್ಮಿಸಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.ಒಬಿಸಿ ವರ್ಗಕ್ಕೆ ಅನ್ಯಾಯ: ಸಂಸ ತ್ತಿನಲ್ಲಿ ಮಂಡನೆಯಾಗಿರುವ ರಂಗನಾಥ ಮಿಶ್ರಾ ವರದಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದ ಅವರು, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ (ಒಬಿಸಿ) ಮುಸ್ಲಿ ಮರಿಗೂ ಶೇ. 15ರಷ್ಟು ಮೀಸಲು ನೀಡಬೇಕೆಂಬ ಶಿಫಾರಸು ರಂಗನಾಥ ಮಿಶ್ರಾ ವರದಿಯಲ್ಲಿದೆ ಎಂದರು.ದುರ್ಬಲ ಸಮಾಜ: ಪರಾಕ್ರಮ, ತ್ಯಾಗ, ಸೇವೆ, ಸಂಸ್ಕೃತಿಯಿಂದ ಜಗತ್ತಿನ ಎಲ್ಲಾ ಜನರಿಗೆ ಆತ್ಮೀಯವಾಗಿದ್ದ ಭಾರತ ಇತ್ತೀಚಿನ ದಿನಗಳಲ್ಲಿ ದುರ್ಬಲ ವಾಗುತ್ತಿದೆ, ದುರ್ಬಲ ಸಮಾಜ ವಾಗುತ್ತಿದೆ ಎಂದರು.ಮತಾಂತರದ ಮೂಲಕ ಕ್ರೈಸ್ತರು, ಲವ್‌ಜಿಹಾದ್ ಮತ್ತು ಭಯೋತ್ಪಾ ದನೆ ಮೂಲಕ ಮುಸ್ಲಿಮರು ಹಾಗೂ  ನಕ್ಸಲಿಸಂ ಮೂಲಕ ಕಮ್ಯುೂನಿಸ್ಟರು ಭಾರತದ ಮೇಲೆ ಏಕಕಾಲಕ್ಕೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿ ದರು.ಪ್ರತಿನಿತ್ಯ 6 ಸಾವಿರದಷ್ಟು ಬಾಂಗ್ಲಾ ನಿರಾಶ್ರಿತರು ಭಾರತದ ಒಳಗೆ ನುಸು ಳುತ್ತಿದ್ದಾರೆ. ಇದೀಗ ನಾಲ್ಕು ಕೋಟಿಗೂ ಅಧಿಕ ಬಾಂಗ್ಲಾ ದೇಶಿಯರು ಭಾರತ ವನ್ನು ಪ್ರವೇಶಿಸಿದ್ದಾರೆ, ಇನ್ನೊಂದೆಡೆ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾ ಗದ ಕೆಲವರು ದೇಶದಲ್ಲಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದರು.ದೇಶದಲ್ಲಿ ಗೊಂದಲ ಸೃಷ್ಟಿಸಲು ಭಯೋತ್ಪಾದಕರು ಮುಂದಾಗಿದ್ದಾರೆ. ಭಯೋತ್ಪಾದನೆಗೆ 90 ಸಾವಿರ ಜನ ಬಲಿಯಾಗಿದ್ದಾರೆ. ಇಷ್ಟಾದರೂ ದೇಶದ ಪ್ರಧಾನಿ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು.ಭಯೋತ್ಪಾದನೆಯಿಂದಾಗಿ ಪಾಕಿ ಸ್ತಾನ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ತಲೆನೋವಾಗಿದೆ ಎಂದು ಹೇಳಿದರು.

ಮಿನಿ ಪಾಕಿಸ್ತಾನ: ಅಸ್ಸಾಂ, ಕೇರಳ ದಲ್ಲಿ ಕೆಲವು ವರ್ಗದವರು ದಿನದಿಂದ ದಿನಕ್ಕೆ ಪ್ರಬಲರಾಗುತ್ತಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆ ಮಿನಿ ಪಾಕಿ ಸ್ತಾನವಾಗಿ ಮಾರ್ಪಟ್ಟಿದೆ ಎಂದರು.ಸೋನಿಯಾ ಕೈವಾಡ: ಅನಾ ಥಾಶ್ರಮ, ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹೆಸರಿ ನಲ್ಲಿ ಇನ್ನೊಂದು ವರ್ಗದವರು ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ ನಡೆ ಯುತ್ತಿರುವ ಮತಾಂತರ ಕ್ರಿಯೆಯಲ್ಲಿ ಸೋನಿಯಾಗಾಂಧಿ ಕೈವಾಡವಿದೆ ಎಂದು ಆರೋಪಿಸಿದರು.ತುಷ್ಟೀಕರಣ ಬೇಡ: ಮುಸ್ಲಿಮರ ಮತ್ತು ಕ್ರೈಸ್ತರ ತುಷ್ಟೀಕರಣ ಮಾಡುವ ರಾಜಕೀಯ ಬೇಡ ಎಂದ ಅವರು, ದೇಶದಲ್ಲಿ ಓಟು, ನೋಟು, ಸೀಟು ರಾಜಕಾರಣ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ರಾಷ್ಟ್ರೀಯ ಕಾರ್ಯ: ಕಾಶಿಯಲ್ಲಿ ವಿಶ್ವನಾಥ, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗಲೇ ಬೇಕು, ಇದು ರಾಷ್ಟ್ರೀಯ ಕಾರ್ಯವಾಗಿದೆ ಎಂದರು. ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಡಾ.ಸಿ.ಎಸ್.ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry