ಮತ್ತಿಗೋಡಿಗೆ ಬಂದ ಧರ್ಮರಾಯ!

7

ಮತ್ತಿಗೋಡಿಗೆ ಬಂದ ಧರ್ಮರಾಯ!

Published:
Updated:

ಗೋಣಿಕೊಪ್ಪಲು: ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರಕ್ಕೆ  ಧರ್ಮರಾಯ, ನಕುಲ, ಕಪಿಲಾ ಎಂಬ ಎರಡು ವರ್ಷದ ನೂತನ ಅತಿಥಿಗಳ ಆಗಮನವಾಗಿದೆ.ಬಳ್ಳೆ ಆನೆ  ಕ್ಯಾಂಪಿನಿಂದ ಈ ಅತಿಥಿಗಳನ್ನು ಕರೆತರಲಾಗಿದೆ. ಕಪಿಲಾನ ತಾಯಿ ಸರಳಾ ಈಗಾಗಲೆ ಮೈಸೂರು ದಸರಾ ಉತ್ಸವಕ್ಕೆ ತೆರಳಿದೆ. ಧರ್ಮರಾಯನ ತಾಯಿ ವರಲಕ್ಷ್ಮಿ, ನಕುಲನ ತಾಯಿ ಗಂಗೆ ಎರಡನೇ ಹಂತದಲ್ಲಿ ದಸರಾ ಉತ್ಸವಕ್ಕೆ ತೆರಳಲಿವೆ. ಈ ಕಾರಣದಿಂದ  ಈ ಮರಿಗಳನ್ನು ಮತ್ತಿಗೋಡಿಗೆ ತರಲಾಗಿದೆ ಎಂದು  ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ  ದೇವರಾಜು  ತಿಳಿಸಿದರು.ಮತ್ತಿಗೋಡು ಕ್ಯಾಂಪಿನಿಂದ ಈಗಾಗಲೆ ಬಲರಾಮ ಹಾಗೂ ಅಭಿಮನ್ಯು ಆನೆಗಳು ದಸರಾ ಉತ್ಸವಕ್ಕೆ ತೆರಳಿವೆ. ಇವುಗಳ ಸ್ಥಾನವನ್ನು ಮರಿ ಆನೆಗಳು ತುಂಬಲಿವೆ ಎಂದು ಅವರು ಹೇಳಿದರು. ತಾಯಿಯಿಂದ  ಈ ಮರಿ ಆನೆಗಳನ್ನು   ಅಗಲಿಸುವುದು ಬಹಳ ಕಷ್ಟವಾಯಿತು. ಆದರೂ ಮುಂದೆ  ಸ್ವತಂತ್ರವಾಗಿ ಜೀವಿಸಲಿ ಎಂಬ ಉದ್ದೇಶದಿಂದ ಬೇರ್ಪಡಿಸಲಾಗಿದೆ ಎಂದರು.ತಾಯಿಯ ಬೆಚ್ಚನೆಯ ಮಡಿಲಲ್ಲಿ  ನಿದ್ರಿಸುತ್ತಿದ್ದ ಮರಿಗಳ ಮಖದಲ್ಲಿ ಅಗಲಿಕೆಯ ನೋವು ಎದ್ದು ಕಾಣುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry