ಮತ್ತೆ ಅಂಗಳಕ್ಕಿಳಿಯುತ್ತೇನೆ: ಅಂಜು ಜಾರ್ಜ್ ವಿಶ್ವಾಸ

ಶನಿವಾರ, ಜೂಲೈ 20, 2019
28 °C

ಮತ್ತೆ ಅಂಗಳಕ್ಕಿಳಿಯುತ್ತೇನೆ: ಅಂಜು ಜಾರ್ಜ್ ವಿಶ್ವಾಸ

Published:
Updated:

ಬೆಂಗಳೂರು: ಕೇರಳದ ಮಯೂಖಾ ಜಾನಿ ಶನಿವಾರ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದಾಗ ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ತಟ್ಟಿದ್ದು ಅಂಜು ಬಿ.ಜಾರ್ಜ್. ಪಕ್ಕದಲ್ಲಿ ಪುಟ್ಟ ಮಗು ಹಾಗೂ ಪತ್ನಿ ಕೂಡ ಇದ್ದರು.ವಿಶೇಷವೆಂದರೆ ಮಯೂಖಾ ಅಳಿಸಿ ಹಾಕಿದ ಕೂಟ ದಾಖಲೆ ಅಂಜು ಅವರ ಹೆಸರಿನಲ್ಲಿತ್ತು. 2006ರಲ್ಲಿ ಅಂಜು  (6.53) ಈ ದಾಖಲೆ ನಿರ್ಮಿಸಿದ್ದರು.`ಮಯೂಖಾ ನನ್ನ ದಾಖಲೆಯನ್ನು ಅಳಿಸಿ ಹಾಕಿದ್ದು ಖಂಡಿತ ಖುಷಿ ನೀಡಿದೆ. ಹೊಸ ಪ್ರತಿಭೆಗಳು ಉದಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ~ ಎಂದು ಅಂಜು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು. `ಮುಂದಿನ ವರ್ಷ ಮತ್ತೆ ಅಂಗಳಕ್ಕಿಳಿದು ಲಾಂಗ್ ಜಂಪ್ ಸ್ಪರ್ಧೆಯನ್ನು ಮುಂದುವರಿಸುತ್ತೇನೆ.ಈಗಾಗಲೇ ಅಭ್ಯಾಸ ಕೂಡ ಶುರು ಮಾಡಿದ್ದೇನೆ~ ಎಂದು ಅವರು ಹೇಳಿದರು. ಗಂಡು ಮಗುವಿನ ತಾಯಿಯಾಗಿರುವ ಅಂಜು ಎರಡು ವರ್ಷದಿಂದ ಅಂಗಳಕ್ಕಿಳಿದಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry