ಬುಧವಾರ, ಮೇ 12, 2021
18 °C

ಮತ್ತೆ ಅವ್ಯವಸ್ಥೆ: ಕ್ರೀಡಾಪಟುಗಳ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸಮಯಕ್ಕೆ ಸರಿಯಾಗಿ ಊಟ ಕೊಡದೆ ಆಟವಾಡಿಸಿದರು. ಊರುಗಳಿಗೆ ತೆರಳಲು ಕ್ರೀಡಾ ಪಟುಗಳಿಗೆ ಪ್ರಯಾಣಭತ್ಯೆ-ಊಟದ ಭತ್ಯೆ ನೀಡಲು ಸತಾಯಿಸಿದರು.

 

ಹೀಗಾಗಿ ಸೋಮವಾರ ರಾತ್ರಿ 7.30 ಆದರೂ ಕ್ರೀಡಾಪಟುಗಳು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಉಮಾ ಲಕ್ಷ್ಮಿಯವರ ಮುಂದೆ ನಿಂತು ಬೇಡುವ ಸನ್ನಿವೇಶ ನಿರ್ಮಾಣವಾಗಿತ್ತು.  ಈ ಸಂದರ್ಭದಲ್ಲಿ ನೂಕುನುಗ್ಗಲು ಏರ್ಪಟ್ಟು ಅಧಿಕಾರಿ ಮತ್ತು ಕ್ರೀಡಾಪಟುಗಳ ನಡುವೆ ವಾಗ್ವಾದವೂ ನಡೆಯಿತು.- -ಇದು ಶ್ರೀನಿವಾಸಪುರದ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರ ಅಸಮಾಧಾನದ ನುಡಿ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆ ಯುತ್ತಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯನ್ನೆ ಮಾಡದೆ ಹಣ ಕೊಟ್ಟಿದ್ದರಿಂದ ತೊಂದರೆಯಾಯಿತು. ಊಟಕ್ಕೆ ಸಮೀಪದ ಹೋಟೆಲ್‌ಗೆ ಹೋಗಿ ಊಟ ಮಾಡಿ ಬರುವಂತೆ ಅಧಿಕಾರಿ ಸೂಚಿಸಿದರು.ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ ಅಧಿಕಾರಿಯ ಈ ವರ್ತನೆ ಸರಿಯಾದುದಲ್ಲ ಎಂದು ಅವರು ದೂರವಾಣಿ ಮೂಲಕ `ಪ್ರಜಾವಾಣಿ~ಗೆ ತಿಳಿಸಿದರು.ಮಧ್ಯಾಹ್ನ 2.30ರ ವೇಳೆಗೆ ಇಲಾಖೆಯ ಅಧಿಕಾರಿಯು ಕ್ರೀಡಾಪಟುಗಳಿಗೆ ಊಟ ಮತ್ತು ಪ್ರಯಾಣದ ಭತ್ಯೆ ಹಂಚಲು ಶುರು ಮಾಡಿದ್ದರು. ಇತರೆ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದರೆ ಕ್ರೀಡಾಪಟುಗಳಿಗೆ ತೊಂದರೆ ಕಡಿಮೆಯಾಗುತ್ತಿತ್ತು.ಸ್ವತಃ ಅಧಿಕಾರಿಯೇ ಹಂಚತೊಡಗಿದ ಪರಿಣಾಮ ಸಂಜೆ 5 ಗಂಟೆಯಾದರೂ ಈ ಹಂಚಿಕೆ ಕಾರ್ಯಕ್ರಮ ನಡೆಯುತ್ತಲೇ ಇತ್ತು.ಕ್ರೀಡಾಪಟುಗಳು ಆಟದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಕಚೇರಿಯಲ್ಲಿ ಗುಂಪು ಗೂಡಿದ್ದರು. ಹಲವರು ಬೇಸರದಿಂದ ಹೊರಟು ಹೋದರು. ಕೊಕ್ಕೋ ಕ್ರೀಡಾಂಗಣದಲ್ಲೂ ಕಲ್ಲುಗಳು ಕಂಡು ಬಂದವು ಎಂದು ಕ್ರೀಡಾ ಪಟುವೊಬ್ಬರು ತಿಳಿಸಿದರು. ಕೆಲವು ಕ್ರೀಡಾ ತೀರ್ಪುಗಾರರೂ ಅಸಮಾಧಾನ ತೋಡಿಕೊಂಡರು.ಕೆಲವು ದಿನಗಳ ಹಿಂದೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಅವ್ಯವಸ್ಥೆ ಎದ್ದು ಕಂಡಿದ್ದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಕ್ರೀಡಾಕೂಟಗಳನ್ನು ಸಮರ್ಪಕವಾಗಿ ನಡೆಸುವಂತೆ ಇಲಾಖೆಯ ಅಧಿಕಾರಿಗೆ ಇತ್ತೀಚೆಗೆ ನಡೆದ ಜಿಲ್ಲಾಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಎಸ್‌ಬಿ,ಮುನಿವೆಂಕಟಪ್ಪ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಶಾಂತಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.