ಗುರುವಾರ , ಜೂನ್ 17, 2021
23 °C

ಮತ್ತೆ ಆಕಾಶವಾಣಿ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ಎಸ್. ಆಚಾರ್ಯ ಅವರ ನಿಧನದ ಶೋಕಾಚರಣೆ ನಿಮಿತ್ತ ಮುಂದೂಡಲಾಗಿದ್ದ ಬೆಂಗಳೂರು ಆಕಾಶವಾಣಿ ಕೇಂದ್ರದ `ಆಕಾಶವಾಣಿ ಹಬ್ಬ~ದ ಮೂರು ದಿನಗಳ ಕಾರ್ಯಕ್ರಮವನ್ನು ಸೋಮವಾರದಿಂದ ಬುಧವಾರದವರೆಗೆ ಆಯೋಜಿಸಿದೆ.ಸೋಮವಾರ (ಮಾ.5) ರಂದು ವಸಂತ ರಂಗ ಮೂರು ನಾಟಕಗಳ ಪ್ರದರ್ಶನ. ಇಲ್ಲಿ ಡಾ.ಚಂದ್ರಶೇಖರ ಕಂಬಾರರ `ಶಿವರಾತ್ರಿ~ ನಾಟಕವನ್ನು - ಪ್ರಯೋಗ ರಂಗ ಪ್ರಸ್ತುತ ಪಡಿಸುತ್ತಿದೆ. `ಮಂಗ ಮಾಣಿಕ್ಯ~ ಪ್ರಹಸನವನ್ನು ಗಂಗೋತ್ರಿ ತಂಡ ಪ್ರದರ್ಶಿಸಲಿದೆ.  ಹಾಗೂ ಗದಗಿನ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ ಗವಾಯಿ ನಾಟ್ಯ ಸಂಘವು  `ಅಕ್ಕಮಹಾದೇವಿ~ ನಾಟಕವನ್ನು ಪ್ರದರ್ಶಿಸಲಿದೆ. ಮಂಗಳವಾರ (ಮಾ6) ನಾದ ವಸಂತದಲ್ಲಿ ಗಣೇಶ್ ಕುಮರೇಶ್ ಸಹೋದರರ ಯುಗಳ ವಯೊಲಿನ್ ವಾದನ ಹಾಗೂ ಮಲ್ಲಾಡಿ ಸಹೋದರರ ಯುಗಳ ಗಾಯನ ಕಛೇರಿ ಆಯೋಜಿಸಲಾಗಿದೆ.ಬುಧವಾರ (ಮಾ.7) ಯುಗಳ ವಸಂತ ಮತ್ತು ವಿನಾಯಕ ತೊರವಿಯವರ ಜುಗಲ್‌ಬಂದಿ. ನಂತರ ಪ್ರವೀಣ್ ಗೋಡ್ಖಿಂಡಿ ಹಾಗೂ ಎಂ.ಕೆ. ಪ್ರಾಣೇಶ್ ಅವರ ಬಾನ್ಸುರಿ ಕೊಳಲು ಜುಗಲ್‌ಬಂದಿ.ಪ್ರವೇಶ ಉಚಿತ. ಸ್ಥಳ: ಕುವೆಂಪು ಕಲಾಕ್ಷೇತ್ರ, ಕಿಮ್ಸ ಕಾಲೇಜು ಆವರಣ,  ಕೆ.ಆರ್.ರಸ್ತೆ,  

ಸೂಚನೆ: ಕುವೆಂಪು ಕಲಾಕ್ಷೇತ್ರದ ಮುಂಭಾಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ, ಒಕ್ಕಲಿಗರ ಸಂಘದ ದಂತ ವೈದ್ಯ ಕಾಲೇಜಿನ ಮುಂಭಾಗದಿಂದ ಸಭಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಅಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಂಜೆ: 6

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.