ಮತ್ತೆ ಉದ್ಯೋಗ ಕಡಿತ ಭೀತಿ

7
ಸೀಮನ್ಸ್‌ನ 15,000; ತೋಷಿಬಾ 2,000 ನೌಕರರು ಮನೆಗೆ?

ಮತ್ತೆ ಉದ್ಯೋಗ ಕಡಿತ ಭೀತಿ

Published:
Updated:
ಮತ್ತೆ ಉದ್ಯೋಗ ಕಡಿತ ಭೀತಿ

ಬರ್ಲಿನ್‌/ಟೋಕಿಯೊ(ಎಎಫ್‌ಪಿ): ಪೂರ್ವ ಮತ್ತು ಪಶ್ಚಿಮ ದೇಶಗಳಲ್ಲಿ ಮತ್ತೆ ಭಾರಿ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಕ್ರಮ ಶುರುವಾಗಿದೆ. ಜಪಾನ್‌ನ ‘ತೊಷಿಬಾ’ ಕಂಪೆನಿ ಮುಂದಿನ ಆರು ತಿಂಗಳಲ್ಲಿ ಒಟ್ಟು 2000 ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದ್ದರೆ, ಜರ್ಮನಿಯ ‘ಸೀಮನ್ಸ್’ 2014ರ ವರ್ಷಾಂತ್ಯದೊಳಗೆ 15,000 ನೌಕರರನ್ನು ಮನೆಗೆ ಕಳುಹಿಸುವುದಾಗಿ ಮುನ್ಸೂಚನೆ ನೀಡಿದೆ.ಜರ್ಮನಿಯ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕ್ಷೇತ್ರದ ಹೆಸರಾಂತ ಕಂಪೆನಿಯಾಗಿರುವ ಸೀಮನ್ಸ್‌, ವೆಚ್ಚ ಕಡಿತ ಉದ್ದೇಶದಿಂದ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದು ಅನಿ ವಾರ್ಯವಾಗಿದೆ ಎಂದಿದೆ. ಜರ್ಮನಿಯಲ್ಲಿಯೇ 5000 ನೌಕರರು ಮತ್ತು ವಿಶ್ವದ ವಿವಿಧೆಡೆಯ ಕಚೇರಿಗಳಲ್ಲಿನ 10,000 ಉದ್ಯೋಗಿ ಗಳನ್ನು ಕೆಲಸದಿಂದ ತೆಗೆದುಹಾಕಲಾಗು ವುದು ಎಂದು ಮ್ಯೂನಿಚ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೀಮನ್ಸ್‌ ಹೇಳಿದೆ.ಕಂಪೆನಿಯು ತನ್ನ ಕೈಗಾರಿಕಾ ಘಟಕದಲ್ಲಿನ 2000 ಹುದ್ದೆಗಳು, ಇಂಧನ ವಿಭಾಗದಲ್ಲಿ 1400, ಮೂಲ ಸೌಕರ್ಯ ವಿಭಾಗದಿಂದ 1400, ಕಂಪೆನಿಯ ಮುಖ್ಯ ಕಚೇರಿಯ ಆಡಳಿತ ವಿಭಾಗದಲ್ಲಿನ 200 ಹುದ್ದೆಗಳನ್ನು ಕಡಿತ ಮಾಡಲಾಗುವುದು. ಈ ಕುರಿತು ಸಂಬಂಧಿಸಿದ ವಿಭಾಗಗಳು ಮತ್ತು ನೌಕರರ ಪ್ರತಿನಿಧಿಗಳ ಜತೆಗೂ ಮಾತು ಕತೆ ನಡೆಸಲಾಗಿದೆ.

ಉದ್ಯೋತ ಕಡಿತ ಕ್ರಮ 2013ರಿಂದಲೇ ಜಾರಿಗೆ ಬರ ಲಿದ್ದು, 2014ರ ವರ್ಷಾಂತ್ಯದೊಳಗೆ ಒಟ್ಟು 15,000ದಷ್ಟು ಸಿಬ್ಬಂದಿ ಸಂಖ್ಯೆ ತಗ್ಗಲಿದೆ ಎಂದು ಕಂಪೆನಿಯ ಮೂಲ ಗಳು ತಿಳಿಸಿವೆ. ಪ್ರಸ್ತುತ ಜರ್ಮನಿಯ ಕಚೇರಿ ಗಳಲ್ಲಿನ 1.19 ಲಕ್ಷ ನೌಕರರು ಸೇರಿ ದಂತೆ ವಿಶ್ವದಾದ್ಯಂತದ ಘಟಕಗಳಲ್ಲಿ ಒಟ್ಟು 3.70 ಲಕ್ಷ ಉದ್ಯೋಗಿಗಳು ಸೀಮನ್ಸ್‌ನಲ್ಲಿದ್ದಾರೆ.ಜಪಾನ್‌ನ ಹೆಸರಾಂತ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಕಂಪೆನಿ ‘ತೊಷಿಬಾ’ ಮಾರುಕಟ್ಟೆ ತಗ್ಗಿದ ಕಾರಣದಿಂದಾಗಿ ತನ್ನ ಸಾಗರೋತ್ತರ ಶಾಖೆಗಳಲ್ಲಿ ಕೆಲವನ್ನು ಮಾರಾಟ ಮಾಡಲಾಗು ವುದು, ಇಲ್ಲವೇ ಮುಚ್ಚಲಾಗುವುದು ಎಂದು ಹೇಳಿದೆ. ಇದರಿಂದಾಗಿ ಒಟ್ಟು 2000 ಮಂದಿ ಕೆಲಸ ಕಳೆದುಕೊಳ್ಳ ಲಿದ್ದಾರೆ.2014ರ ಮಾರ್ಚ್‌ ವೇಳೆಗೆ ಚೀನಾ, ಇಂಡೋನೇಷ್ಯಾ ಮತ್ತು ಪೋಲೆಂಡ್‌ ನಲ್ಲಿನ ಟೆಲಿವಿಷನ್‌ ತಯಾರಿಕಾ ಘಟಕ ಗಳನ್ನು ಮುಚ್ಚುವುದಾಗಿ ಕಂಪೆನಿಯ ವಕ್ತಾರರು ಸುದ್ದಿಸಂಸ್ಥೆಗೆ ಸೋಮವಾರ ತಿಳಿಸಿದರು. ಈಜಿಪ್ಟ್‌ನಲ್ಲಿ ಜಂಟಿ ಸಹಭಾಗಿತ್ವದ ಕಂಪೆನಿ ಸೇರಿದಂತೆ ತೊಷಿಬಾ, ಒಟ್ಟು 4 ಸಾಗರೋತ್ತರ ಟಿವಿ ತಯಾರಿಕಾ ಘಟಕ ಗಳನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry