ಮತ್ತೆ ಕಾಶ್ಮೀರ ವಿವಾದ ಕೆದಕಿದ ಪಾಕ್

7

ಮತ್ತೆ ಕಾಶ್ಮೀರ ವಿವಾದ ಕೆದಕಿದ ಪಾಕ್

Published:
Updated:

ವಿಶ್ವಸಂಸ್ಥೆ (ಪಿಟಿಐ): ಕಾಶ್ಮೀರ ವಿವಾದದ ಕುರಿತು ಪಾಕಿಸ್ತಾನ ಅಸಮರ್ಥನೀಯ ವಾದ ಮಂಡಿಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದ ಎರಡನೆಯ ದಿನವಾದ ಬುಧವಾರವೂ ಭಾರತ ಹಾಗೂ ಪಾಕ್ ಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು.ಅಧಿವೇಶನದ ಚರ್ಚೆಯಲ್ಲಿ ಮಾತನಾಡಿದ ಪಾಕಿಸ್ತಾನದ ರಾಜತಾಂತ್ರಿಕ ರಾಜಾ ಬಷೀರ್ ತರಾರ್, ಜಮ್ಮು ಮತ್ತು ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಸಹಭಾಗಿತ್ವವನ್ನು ತಮ್ಮ ರಾಷ್ಟ್ರ ಅಭಿನಂದಿಸುತ್ತದೆ. ಅಂತರರಾಷ್ಟ್ರೀಯ ಶಾಂತಿಗೆ ಜಮ್ಮು ಕಾಶ್ಮೀರ, ಪ್ಯಾಲಸ್ತೈನ್‌ನಂತಹ ವಿವಾದಗಳಿಗೆ ಪರಿಹಾರ ಕಂಡುಹಿಡಿಯುವುದು ಅಗತ್ಯವಾಗಿದೆ ಎಂದು ಹೇಳಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಯಿತು.ಪಾಕ್‌ನ ಈ ಪ್ರಸ್ತಾವವನ್ನು ಖಂಡಿಸಿದ ಭಾರತದ ಪ್ರತಿನಿಧಿ ನ್ಯಾಮಗ್ಯಾ ಖಂಪಾ, `ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೇ ಆಗಿರುವಾಗ ಮತ್ತೆ ಈ ಕುರಿತು ಪ್ರಸ್ತಾವ ಮಾಡುತ್ತಿರುವುದು ಸರಿಯಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry