ಸೋಮವಾರ, ಏಪ್ರಿಲ್ 12, 2021
30 °C

ಮತ್ತೆ ಕುಮಾರ ಸ್ವಾಮಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ಸರ್ಕಾರದಿಂದ ಅಗತ್ಯ ಅನುಕೂಲ ಪಡೆಯುವ ಉದ್ದೇಶದಿಂದಲೇ ಮುಖ್ಯಮಂತ್ರಿ ಕುಟುಂಬದ ಸದಸ್ಯರು ಟ್ರಸ್ಟಿಗಳಾಗಿರುವ ‘ಪ್ರೇರಣ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್’ಗೆ ಕೆಲವರು ಅಕ್ರಮ ವಂತಿಗೆ ನೀಡಿದ್ದಾರೆ ಎಂಬ ಆರೋಪವನ್ನು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.ಸರ್ಕಾರಕ್ಕೆ 118 ಕೋಟಿ ರೂಪಾಯಿ ಬಾಕಿ ಕೊಡಬೇಕಾದ ಸಂಸ್ಥೆಗೆ ಐದು ಷರ್ಷದ ಹಿಂದೆ ನೋಟಿಸ್  ಕೊಡಲಾಗಿದೆ. ಆದರೆ, ಇದೇ ಸಂಸ್ಥೆಗೆ ಕಳೆದ ವರ್ಷ ಪುನಃ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಈ  ಸಂಸ್ಥೆಯಿಂದ ‘ಪ್ರೇರಣ ಶಿಕ್ಷಣ ಟ್ರಸ್ಟ್’ಗೆ ವಂತಿಗೆ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ಗುರುವಾರ ದೂರಿದರು.ಮೂಲ ಒಪ್ಪಂದ ಉಲ್ಲಂಘಿಸಿದ ಸಂಸ್ಥೆಯೊಂದಕ್ಕೆ ಮತ್ತೆ ಗಣಿಗಾರಿಕೆಗೆ ಅನುಮತಿ ಕೊಡುವ ಮೂಲಕ ಬೊಕ್ಕಸಕ್ಕೆ ಭಾರಿ ನಷ್ಟ ಮಾಡಲಾಗಿದೆ. ಅಲ್ಲದೆ, ನಷ್ಟದಲ್ಲಿರುವುದಾಗಿ ಲೆಕ್ಕಪತ್ರ ತೋರಿಸಿರುವ ಸಂಸ್ಥೆ ಶಿಕ್ಷಣ ಸಂಸ್ಥೆಗೆ ದೇಣಿಗೆ ನೀಡಿದೆ. ಇದರ ಹಿಂದಿನ ರಹಸ್ಯವೇನು? ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡುವ ಸಂಸ್ಥೆಗಳು ಎಷ್ಟೋ ಇವೆ. ಅನಾಥರ ಏಳಿಗೆಗೆ ದುಡಿಯುವ ಸಂಸ್ಥೆಗಳೂ ಬೇಕಾದಷ್ಟಿವೆ. ಅವೆಲ್ಲವನ್ನು ಬಿಟ್ಟು ಇದೇ ಸಂಸ್ಥೆಗೆ ದೇಣಿಗೆ ಕೊಡುವುದೆಂದರೇನು ಎಂದು ಮಾಜಿ ಮುಖ್ಯಮಂತ್ರಿ ಕೇಳಿದರು.‘ಶಿಕ್ಷಣ ಸಂಸ್ಥೆಗೆ ದೇಣಿಗೆ ಪಡೆಯುವುದಕ್ಕೆ ಆಕ್ಷೇಪವಿಲ್ಲ. ಆದರೆ, ಅಧಿಕಾರ ದುರುಪಯೋಗ ಮಾಡಿ ಲಾಭ ಮಾಡಿಕೊಳ್ಳುವುದಕ್ಕೆ ನಮ್ಮ ಆಕ್ಷೇಪ. ಕೇವಲ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿರುವ ಸಂಸ್ಥೆ ಕೋಟಿಗಟ್ಟಲೆ ದೇಣಿಗೆ ನೀಡಿದೆ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.