ಗುರುವಾರ , ಮೇ 13, 2021
17 °C

ಮತ್ತೆ ಕುಸಿದ ಸೂಚ್ಯಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಕುಸಿದ ಸೂಚ್ಯಂಕ

ಮುಂಬೈ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ತೀವ್ರಗೊಂಡಿರುವ ಯೂರೋಪ್  ಸಾಲದ ಬಿಕ್ಕಟ್ಟಿನಿಂದ ಹೂಡಿಕೆದಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದು, ಸೋಮವಾರವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 111 ಅಂಶಗಳಷ್ಟು ಇಳಿಕೆ ಕಂಡಿದೆ.ಕಳೆದ ನಾಲ್ಕು ವಹಿವಾಟು ದಿನಗಳಲ್ಲಿ ಸೂಚ್ಯಂಕ ಇಳಿಯುತ್ತಲೇ ಇದ್ದು, ಸೋಮವಾರದ ಅಂತ್ಯಕ್ಕೆ  ಆಗಸ್ಟ್ 26ರ ಮಟ್ಟವಾದ 16,051 ಅಂಶಗಳಿಗೆ ತಲುಪಿದೆ.  ತೈಲ ಶುದ್ಧೀಕರಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ  ಸಂಬಂಧಿಸಿದ ಷೇರುಗಳ ಮಾರಾಟ ಒತ್ತಡ ಹೆಚ್ಚಿದೆ.ಈ ಹಿನ್ನೆಲೆಯಲ್ಲಿ ಸೋಮವಾರದ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು 16 ಸಾವಿರದ ಗಡಿಗಿಂತ ಕೆಳಗೆ ಇಳಿದಿತ್ತು. ಕಳೆದ ನಾಲ್ಕು ವಹಿವಾಟು ದಿನಗಳಲ್ಲಿ `ಆರ್‌ಐಎಲ್~ ಷೇರುಗಳು ಶೇ 10.83ರಷ್ಟು ಹಾನಿಗೊಳಗಾಗಿವೆ.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 32 ಅಂಶಗಳನ್ನು ಕಳೆದುಕೊಂಡು 4,835 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರ ಜತೆಗೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಚಟುವಟಿಕೆಗಳೂ ಹೆಚ್ಚಿದ್ದು, ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಒಟ್ಟು ್ಙ 2,500 ಕೋಟಿಗಳಷ್ಟು ಮೌಲ್ಯದ ಷೇರುಗಳನ್ನು ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.