ಮತ್ತೆ ಜೊತೆಯಾದ ಜ್ವಾಲಾ- ಅಶ್ವಿನಿ

7

ಮತ್ತೆ ಜೊತೆಯಾದ ಜ್ವಾಲಾ- ಅಶ್ವಿನಿ

Published:
Updated:

ನವದೆಹಲಿ (ಐಎಎನ್‌ಎಸ್): ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಮುಂಬರುವ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡಲು ನಿರ್ಧರಿಸಿದ್ದಾರೆ.ಈ ಟೂರ್ನಿ ಅಕ್ಟೋಬರ್ 15 ರಿಂದ 20ರ ವರೆಗೆ ನಡೆಯಲಿದೆ. ಲಂಡನ್ ಒಲಿಂಪಿಕ್ಸ್ ನಂತರ ಜ್ವಾಲಾ ಸ್ಪರ್ಧಾ ಕಣದಿಂದ ದೂರ ಸರಿದಿದ್ದರು. ಆ ಬಳಿಕ ಅಶ್ವಿನಿ ಅವರು ಪ್ರದ್ನ್ಯಾ ಗಾದ್ರೆ ಜೊತೆ ವಿವಿಧ ಟೂರ್ನಿಗಳಲ್ಲಿ ಆಡಿದ್ದರು.ಇದೀಗ ಜ್ವಾಲಾ ಸ್ಪರ್ಧಾ ಕಣಕ್ಕೆ ಮರಳಲು ಬಯಸಿದ್ದಾರೆ. ಈ ಕಾರಣ ಇಬ್ಬರೂ ಮತ್ತೆ ಜೊತೆಯಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry