ಮತ್ತೆ ತಲೆ ಎತ್ತಿದ್ದ ಕಿರ್ಪಾಣ್ ವಿವಾದ

7

ಮತ್ತೆ ತಲೆ ಎತ್ತಿದ್ದ ಕಿರ್ಪಾಣ್ ವಿವಾದ

Published:
Updated:

ಟೊರಾಂಟೊ (ಐಎಎನ್‌ಎಸ್): ಗುಪ್ತ ಆಯುಧಗಳನ್ನು ಹೊಂದಿದ್ದಾರೆನ್ನುವ ಕಾರಣ ನೀಡಿ ಕ್ಯೂಬೆಕ್ ಪ್ರಾಂತೀಯ ಶಾಸನ ಸಭೆಯಲ್ಲಿ ಬುಧವಾರ ಸಿಖ್ ಸಮುದಾಯದ ನಾಲ್ವರ ಪ್ರವೇಶಕ್ಕೆ ಅಡ್ಡಿಪಡಿಸುವ ಮೂಲಕ ಕಿರ್ಪಾಣ್ ಪ್ರಕರಣ ಮತ್ತೊಮ್ಮೆ ತಲೆ ಎತ್ತಿದಂತಾಗಿದೆ.ಕಿರ್ಪಾಣ್‌ಗಳಂತಹ ಸಾಂಪ್ರದಾಯಿಕ  ‘ಆಯುಧ’ಗಳನ್ನು ಧರಿಸಲು ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ಮಸೂದೆಯ ವಿಷಯವಾಗಿ ನಡೆಯಲಿದ್ದ ಚರ್ಚೆಯಲ್ಲಿ ಪಾಲ್ಗೊಳ್ಳಲು ಈ ನಾಲ್ವರು ಶಾಸನಸಭೆಗೆ ಪ್ರವೇಶಿಸುತ್ತಿದ್ದಂತೆಯೇ, ಭದ್ರತಾ ಸಿಬ್ಬಂದಿ ಅವರಿಗೆ ತಡೆಯೊಡ್ಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry