ಶನಿವಾರ, ಆಗಸ್ಟ್ 15, 2020
21 °C

ಮತ್ತೆ ತೆರೆದ ಶಾಲೆ ಬಾಗಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿರಾಬಾದ್: ಸ್ಥಳೀಯ ಡೇರಿಫಾರ್ಮ್ ಪ್ರದೇಶದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಸೋಮವಾರ ನಡೆಯಿತು.ಇಲಾಖೆಯ ಆದೇಶದಂತೆ ಸೋಮವಾರವೇ ಶಾಲೆಯ ದಾಖಲಾತಿ ಆರಂಭವಾಗಿದೆ. ಮೊದಲದಿನವೇ ಶಾಲೆಗೆ ಬಂದ ಮಕ್ಕಳಿಗೆ ಸಿಹಿ ಊಟದ ಭಾಗ್ಯ ಲಭಿಸಿತು.ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಶಾಲಾ ಸಮವಸ್ತ್ರ ಬಟ್ಟೆಗಳನ್ನು ವಿತರಿಸಲಾಯಿತು.  ಎಸ್‌ಡಿಎಮ್‌ಸಿ ಅಧ್ಯಕ್ಷ ಮೋಹಿನ್, ಉಪಾಧ್ಯಕ್ಷೆ ಮೌಲಾಬಿ, ಸದಸ್ಯೆ ಸಾಹೇರಾ ಬೇಗಮ್ ಮತ್ತು ಕೆಲವು ಪಾಲಕರು ಪಾಲ್ಗೊಂಡಿದ್ದರು. ಮುಖ್ಯಗುರು ಮಹೇಶ ಸದರಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು. ಶಿಕ್ಷಕ ಕೊಟ್ರಪ್ಪ ಗಡಗಿ ನಿರೂಪಿಸಿ ವಂದಿಸಿದರು.ಹಿರಿಯ ಪ್ರಾಥಮಿಕ ಶಾಲೆ:
ಇದ್ಲ್ಲಲ್ಲದೇ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಡ ಶಾಲಾ ಪ್ರಾರಂಭೋತ್ಸವ ನಡೆಯಿತು. ಎಸ್‌ಡಿಎಮ್‌ಸಿ ಅಧ್ಯಕ್ಷ ಲಕ್ಷ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಯೆಟ್ ಕಾಲೇಜಿನ ಉಪನ್ಯಾಸಕ ಶರಣಪ್ಪ ವಟಗಲ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಗುರು ಯಲ್ಲಪ್ಪ ಚಂದಾವರಿ ಕಾರ್ಯಕ್ರಮ ನಿರ್ವಹಿಸಿದರು.ಎಸ್‌ಡಿಎಮ್‌ಸಿ ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಕರವೇ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.