ಮತ್ತೆ ದಿಲ್ ಹೈ ಕೆ ಮಾನ್ತಾ ನಹಿ..?

ಸೋಮವಾರ, ಮೇ 20, 2019
33 °C

ಮತ್ತೆ ದಿಲ್ ಹೈ ಕೆ ಮಾನ್ತಾ ನಹಿ..?

Published:
Updated:
ಮತ್ತೆ ದಿಲ್ ಹೈ ಕೆ ಮಾನ್ತಾ ನಹಿ..?

ಪೂಜಾ ಭಟ್ ದಿಲ್ ಹೈ ಕೆ ಮಾನ್ತಾ ನಹಿ ಚಿತ್ರವನ್ನು ರಿಮೇಕ್ ಮಾಡಲು ಉತ್ಸುಕರಾಗಿದ್ದಾರಂತೆ.ದೆಹಲಿಯಲ್ಲಿ ಈ ಬಗ್ಗೆ ಮಾತನಾಡುತ್ತ ಪೂಜಾಭಟ್ ಇದು ತಮ್ಮ ಕನಸಿನ ಪ್ರೊಜೆಕ್ಟ್ ಎಂದು ಸಹ ಒಪ್ಪಿಕೊಂಡಿದ್ದಾರೆ. ಚಿತ್ರವನ್ನು ಆರಂಭಿಸುವ ಮುನ್ನವೇ ಪಾತ್ರಗಳನ್ನೂ ಆಯ್ಕೆ ಮಾಡಿದ್ದಾರಂತೆ.1991ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಪೂಜಾಭಟ್ ಸಿರಿವಂತನ ಮಗಳ ಪಾತ್ರವನ್ನು ನಿರ್ವಹಿಸಿದ್ದರು. ಅದೇ ಪಾತ್ರವನ್ನೀಗ ತಮ್ಮ ಸಹೋದರಿ ಆಲಿಯಾ ಭಟ್ ನಿರ್ವಹಿಸುವಳು. ಆಮೀರ್ ಖಾನ್ ಪಾತ್ರವನ್ನು ರಣಬೀರ್ ಕಪೂರ್‌ಗೆ ವಹಿಸುವೆ ಎಂದೆಲ್ಲ ಪೂಜಾ ಹೇಳುತ್ತಾರೆ.ಮನಮೆಚ್ಚಿದವನೊಂದಿಗೆ ಮದುವೆಯಾಗಲು ಮನೆ ಬಿಟ್ಟು ಬಂದ ಹುಡುಗಿಯನ್ನು ಸಂಗಾತಿಯ ಬಳಿ ತಲುಪಿಸಲು ಸಹಾಯ ಮಾಡುವ ವರದಿಗಾರನ ಪಾತ್ರ ಆಮೀರ್‌ಖಾನ್ ವಹಿಸಿಕೊಂಡಿದ್ದರು.1991ರಲ್ಲಿ ಬಾಕ್ಸ್ ಆಫೀಸಿನಲ್ಲಿ ಹಿಟ್ ಎನಿಸಿಕೊಂಡ ಈ ಚಿತ್ರದ ಸಂಗೀತ ಈಗಲೂ ಜನಪ್ರಿಯವಾಗಿದೆ. ವಿಷಯವಸ್ತುವೂ ಅಷ್ಟೇ ಸಮಕಾಲೀನವಾಗಿದೆ. ಹೊಸತನದ ಸ್ಪರ್ಶ ನೀಡಿ ಈ ಚಿತ್ರವನ್ನು ಮರು ನಿರ್ಮಿಸುವೆ. ಆಗ ಅಪ್ಪ ಇದನ್ನು ನಿರ್ದೇಶಿಸಿದ್ದರು. ಅವರ ನಿರ್ದೇಶನದ ಚಿತ್ರಗಳನ್ನು ರೀಮೇಕ್ ಮಾಡುವುದರಿಂದ ಸಾಕಷ್ಟು ಕಲಿತಂತೆಯೂ ಆಗುತ್ತದೆ ಎನ್ನುತ್ತಾರೆ ಪೂಜಾ ಭಟ್.ಆಲಿಯಾ ಭಟ್ ಬಗ್ಗೆ ಮೆಚ್ಚುಗೆ ಸೂಸುವ ಪೂಜಾ, ಆಲಿಯಾ ಕರಣ್ ಜೋಹರ್ ಚಿತ್ರದೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿ ತಂದಿದೆ ಎಂದು ಹೇಳಲೂ ಅವರು ಮರೆಯುವುದಿಲ್ಲ.`ಸ್ಟುಡೆಂಟ್ ಆಫ್ ದಿ ಇಯರ್~ ಚಿತ್ರದಲ್ಲಿ ಆಲಿಯಾ ಅತ್ಯಂದ ಸುಂದರವಾಗಿ ಕಾಣಿಸಿಕೊಂಡಿದ್ದಾಳೆ. ಟ್ರೇಲರ್ ನೋಡುತ್ತಿದ್ದರೆ, ಹೊಸ ತಾರೆಯೊಂದರ ಉಗಮವಾದಂತೆ ಎನಿಸುತ್ತಿದೆ ಎಂದೆಲ್ಲ ಆಲಿಯಾ ಬಗ್ಗೆ ಪೂಜಾ ಹೊಗಳಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry