ಬುಧವಾರ, ನವೆಂಬರ್ 20, 2019
27 °C

ಮತ್ತೆ ಬಂದಿದೆ `ಬೈಲೂ'

Published:
Updated:
ಮತ್ತೆ ಬಂದಿದೆ `ಬೈಲೂ'

ಕೋಲ್ಕತ್ತಾದ ಸೀರೆ ವಿನ್ಯಾಸಕ ಬಪ್ಪಾದಿತ್ಯ ಬಿಸ್ವಾಸ್ ಮತ್ತೊಮ್ಮೆ ತಮ್ಮ `ಬೈಲೂ' ಸಂಗ್ರಹದೊಂದಿಗೆ ನಗರಕ್ಕೆ ಆಗಮಿಸಿದ್ದಾರೆ.ವರ್ಷಕ್ಕೆರಡೇ ಬಾರಿ ಬೆಂಗಳೂರಿನಲ್ಲಿ ತಮ್ಮ ಸೀರೆಗಳ ಪ್ರದರ್ಶನ, ಮಾರಾಟಕ್ಕಾಗಿ ಬರುವ ಬಪ್ಪಾದಿತ್ಯ ಅವರು ಕಳೆದ ಬಾರಿ ಬಂದಾಗ ಏಪ್ರಿಲ್‌ನಲ್ಲಿ ಬರುವುದಾಗಿ ಕೊಟ್ಟ ಮಾತಿನಂತೆ ಮತ್ತಷ್ಟು ವಿಶಿಷ್ಟವಾದ ಸಂಗ್ರಹದೊಂದಿಗೆ ಬಂದಿದ್ದಾರೆ.ಈ ಬಾರಿಯ ಸಂಗ್ರಹಕ್ಕೆ ಬೇಸಿಗೆ ಸಂಗ್ರಹವೆಂಬ ಹೆಸರಿದ್ದರೂ ಅದರಲ್ಲಿ ರೇಷ್ಮೆ ಮತ್ತು ಹತ್ತಿ ಫ್ಯಾಬ್ರಿಕ್‌ನಲ್ಲಿ ವಿನ್ಯಾಸಗೊಂಡಿರುವ ವೈವಿಧ್ಯಮಯ ಸೀರೆಗಳಿವೆ. ಮಸ್ಲಿನ್, ಚಿಕ್ ಲಿನನ್, ಫ್ರೀಡಂ ಫ್ಯಾಬ್ರಿಕ್ ಎಂದೇ ಕರೆಯಲಾಗುವ ಆಬಿರ್ ಸೀರೆ, `ಬೈಲೂ  ಸ್ಪರ್ಶ' ಪಡೆದ ದಕ್ಷಿಣ ಭಾರತದ ಸಾಂಪ್ರದಾಯಿಕ `ದಕ್ಷಿಣಿ' ಸೀರೆಗಳು, ಬೈಲೂ ಬ್ರಾಂಡ್‌ನ `ಸಿಗ್ನೇಚರ್' ಸೀರೆ ಎಂದೇ ಗುರುತಿಸಲಾಗುವ ಜಾಮ್ದಾನಿ ರೇಷಿಮೆ ಸೀರೆಗಳೂ ಇಲ್ಲಿವೆ.ಬಪ್ಪಾದಿತ್ಯ ಬಿಸ್ವಾಸ್ ಅವರೊಂದಿಗೆ ಎಂದಿನಂತೆ ಮೀರಾ ಸಾಗರ್ ವಿನ್ಯಾಸದ `ವಯಾ' ಸೀರೆ, ಡ್ರೆಸ್ ಮೆಟೀರಿಯಲ್‌ಗಳೂ ಇವೆ. ಮಹೇಶ್ವರ್ ಬ್ರಾಂಡ್‌ಗೆ ಎರಡು ದಶಕಗಳಿಂದ ವಿನ್ಯಾಸಕರಾಗಿರುವ ಮೀರಾ ಸಾಗರ್ ಅವರು ಈ ಬಾರಿಯ ಸಂಗ್ರಹದಲ್ಲಿ ಬೇಸಿಗೆಗೆ ಒಪ್ಪುವ ಸೀರೆಗಳು, ದುಪಟ್ಟಾಗಳು ಮತ್ತು ಫ್ಯಾಬ್ರಿಕ್‌ಗಳನ್ನು ತಂದಿದ್ದಾರೆ.ಈ ಪ್ರದರ್ಶನ ಮಾರಾಟವು ಇಂದು ಮತ್ತು ನಾಳೆ (ಏ.5, 6) ವಿಂಡ್ಸರ್ ಮ್ಯಾನರ್‌ನ ಮುಂಭಾಗದಲ್ಲಿರುವ `ರೇನ್‌ಟ್ರೀ' ಸಭಾಂಗಣದಲ್ಲಿ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ. ಸಂಪರ್ಕಕ್ಕೆ: 3272 3251/2235 4396.

 

ಪ್ರತಿಕ್ರಿಯಿಸಿ (+)