ಮಂಗಳವಾರ, ಮಾರ್ಚ್ 9, 2021
30 °C
ಹರಿದುಬರಲಿದೆ ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಗೋವಾ ಭಕ್ತರ ಪ್ರವಾಹ

ಮತ್ತೆ ಬಂದಿದೆ ‘ಚರ್ಚ್‌ ಹಬ್ಬ’

ಪ್ರಜಾವಾಣಿ ವಾರ್ತೆ/ ಪಂಡಿತ್ ನಾಟೀಕರ್ Updated:

ಅಕ್ಷರ ಗಾತ್ರ : | |

ಮತ್ತೆ ಬಂದಿದೆ ‘ಚರ್ಚ್‌ ಹಬ್ಬ’

ಕೆ.ಆರ್. ನಗರ: ತಾಲ್ಲೂಕಿನ ಡೋರ್ನಹಳ್ಳಿ ಸಂತ ಅಂತೋಣಿ ಕ್ಷೇತ್ರದ ವಾರ್ಷಿಕ ಮಹೋತ್ಸವವು (ಹಬ್ಬದ ದಿನ) ಜೂನ್ 13ರಂದು ಅದ್ಧೂರಿಯಾಗಿ ನಡೆಯಲಿದೆ.ಡೋರ್ನಹಳ್ಳಿ ಸಂತ ಅಂತೋಣಿ ಪುಣ್ಯಕ್ಷೇತ್ರದಲ್ಲಿ ಜೂನ್ 4ರಂದು ಸಂಜೆ 6ಕ್ಕೆ ಧ್ವಜಾರೋಹಣ ಮೂಲಕ  ವಾರ್ಷಿಕೋತ್ಸವ ಆರಂಭವಾಗಿದೆ. ಇದಕ್ಕೆ ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಗೋವಾ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತಾರು ಬರುತ್ತಾರೆ.

ಜೂನ್ 13ರಂದು ಬೆಳಿಗ್ಗೆ 10ಕ್ಕೆ ಮೈಸೂರು ಧರ್ಮಾಧ್ಯಕ್ಷ ಬಿಷಪ್‌ ಡಾ.ಥಾಮಸ್ ಅಂತೋಣಿ ವಾಳಪಿಳ್ಳೈ ಅವರಿಂದ ಆಡಂಬರ ಗಾಯನ, ಬಲಿಪೂಜೆ, 11.30ಕ್ಕೆ ಬೆಂಗಳೂರು ಧರ್ಮಕ್ಷೇತ್ರದ ವಂ. ಸ್ವಾಮಿ ಜೋಸೆಫ್ ಅಬ್ರಹಾಂ ಅವರಿಂದ ತಮಿಳಿನಲ್ಲಿ ಆಡಂಬರ ಗಾಯನ ಬಲಿಪೂಜೆ, ಸಂಜೆ 7ಕ್ಕೆ ಸಂತ ಅಂತೋಣಿ ಅವರ ಶೃಂಗಾರ ಭರಿತ ವೈಭವ ತೇರು ಮೆರವಣಿಗೆ ನಡೆಯಲಿದೆ. ಅಲ್ಲದೇ ಭಕ್ತರಿಂದ ಅಂದು ನಸುಕಿನ 5 ಗಂಟೆಯಿಂದ ಗಂಟೆಗೊಮ್ಮೆ ದಿವ್ಯ ಬಲಿಪೂಜೆ ನಡೆಯಲಿದೆ.ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ. ದೂರ ಇರುವ ಡೋರ್ನಹಳ್ಳಿ ಸಂತ ಅಂತೋಣಿ ಪುಣ್ಯ ಕ್ಷೇತ್ರಕ್ಕೆ ಮೈಸೂರು ಮತ್ತು ಕೆ.ಆರ್. ನಗರ ಮಾರ್ಗವಾಗಿ ಬರುವ ಭಕ್ತರಿಗೆ ಬಸ್ ಮತ್ತು ರೈಲುಗಳ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಕಚೇರಿ ಹೊಂದಿರುವ ಡೋರ್ನಹಳ್ಳಿ ಗ್ರಾಮವು ಸುಮಾರು 500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ ಕ್ರಿಶ್ಚಿಯನ್‌ ಸಮುದಾಯದವರು, ಲಿಂಗಾಯತರು ಮತ್ತು ದಲಿತರು ವಾಸವಾಗಿದ್ದಾರೆ. ಸುಮಾರು 5 ಎಕರೆ ವಿಸ್ತೀರ್ಣ ಹೊಂದಿರುವ ಈ ಚರ್ಚ್, ಸಮುದಾಯ ಭವನ, ಭಕ್ತರಿಗಾಗಿ ಸಾಮಾನ್ಯ ವಸತಿ ಗೃಹಗಳಗಳನ್ನು ಹೊಂದಿದೆ.ಧಾರ್ಮಿಕ ವಸ್ತುಗಳ ಕೊಠಡಿಯೂ ಇದೆ. ಪ್ರಾಣಿ, ಪಕ್ಷಿಗಳನ್ನೂ ಸಾಕಲಾಗಿದೆ. ವಸ್ತುಗಳನ್ನು ಕಳೆದುಕೊಂಡವರು, ಅನಾರೋಗ್ಯದಿಂದ ಬಳಲುತ್ತಿರುವವರು, ನಿರುದ್ಯೋಗಿಗಳು, ನ್ಯಾಯಾಲಯದಲ್ಲಿನ ವ್ಯಾಜ್ಯಗಳಿಗಾಗಿ, ಸಂತಾನ ಭಾಗ್ಯಕ್ಕಾಗಿ ಹೀಗೆ ನಾನಾ ಬಗೆಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಡೋರ್ನಹಳ್ಳಿ ಚರ್ಚ್‌ಗೆ ಹರಕೆ ಹೊರುವ ಭಕ್ತರು ಹೆಚ್ಚು. ಕಳೆದ ನಾಲ್ಕು ವರ್ಷಗಳಿಂದ ವಂ. ಗುರು ಗಿಲ್ಬರ್ಟ್ ಡಿ’ಸಿಲ್ವ ಅವರು ಕ್ಷೇತ್ರದ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.