`ಮತ್ತೆ ಬರ ಬೇಡ' ಪ್ರದರ್ಶನ

6

`ಮತ್ತೆ ಬರ ಬೇಡ' ಪ್ರದರ್ಶನ

Published:
Updated:

ಮಾಲೂರು:  ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಮಧುಸೀತಪ್ಪ ನಿರ್ಮಾಣದ `ಮತ್ತೆ ಬರ ಬೇಡ' ಸಾಕ್ಷ್ಯಚಿತ್ರ ಪ್ರದರ್ಶನ ಭಾನುವಾರ ನಡೆಯಿತು.`ಈ ಭೂಮಿ' ತಮಟೆ ಕಲಾತಂಡದೊಂದಿಗೆ ಜನರನ್ನು ಒಗ್ಗೂಡಿಸಿ ಯಶಸ್ವಿ ಪ್ರದರ್ಶನ ನೀಡಲಾಯಿತು. ಸಾಕ್ಷ್ಯಚಿತ್ರ ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರದರ್ಶನವು ಕಡಿಯನೂರು, ಕೋಡಿಹಳ್ಳಿ, ನಾಗೊಂಡಹಳ್ಳಿ, ಕೋಡಿಹಳ್ಳಿ, ಟೇಕಲ್, ಕೆ.ಜಿ.ಹಳ್ಳಿ, ಮಾಸ್ತಿ ಪದವಿ ಪೂರ್ವ ಕಾಲೇಜು ಮತ್ತು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರದರ್ಶನ ನಡೆಯಿತು. `ತಾಲ್ಲೂಕಿನ ಟೇಕಲ್, ಮಾಸ್ತಿ, ಕಸಬಾ ಹೋಬಳಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಪ್ರದರ್ಶನ ನೀಡುವುದಾಗಿ' ಸಹ ಸಂಚಾಲಕ ಎ.ಅಶ್ವತ್ಥರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry