ಮತ್ತೆ ಭಾರತ ತಂಡದ ಪೋಷಾಕು ತೊಡುವ ನಿರೀಕ್ಷೆ: ಯುವಿ

7

ಮತ್ತೆ ಭಾರತ ತಂಡದ ಪೋಷಾಕು ತೊಡುವ ನಿರೀಕ್ಷೆ: ಯುವಿ

Published:
Updated:

ನವದೆಹಲಿ: ಕ್ಯಾನ್ಸರ್‌ನಿಂದ ಬಳಲಿರುವ ಯುವರಾಜ್ ಸಿಂಗ್ ಅವರು ಬೇಗ ಗುಣವಾಗಿ ಮತ್ತೆ ಭಾರತ ತಂಡದ ಪೋಷಾಕು ತೊಟ್ಟುಕೊಂಡ ಆಡುವ ನಿರೀಕ್ಷೆ ಹೊಂದಿದ್ದಾರೆ. ಇಂಥ ಆಶಯವನ್ನು ಅವರು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.`ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ ಇದು ಕಷ್ಟಕಾಲ ಎನ್ನುವುದು ನಿಜ. ಇಂಥ ಪರಿಸ್ಥಿತಿಯನ್ನು ಎದುರಿಸಿ ಹೊರಬಂದಾಗಲೇ ಇನ್ನಷ್ಟು ಬಲವುಳ್ಳ ವ್ಯಕ್ತಿಯಾಗಲು ಸಾಧ್ಯ. ನನ್ನ ಜೊತೆಗೆ ದೇಶದ ಜನರ ಪ್ರಾರ್ಥನೆಯೂ ಇದೆ~ ಎಂದು `ಯುವಿ~ ತಿಳಿಸಿದ್ದಾರೆ.`ಮತ್ತೆ ದೇಶದ ತಂಡದ ಪೋಷಾಕು ತೊಡಬೇಕು, ಕ್ಯಾಪ್ ಹಾಕಿಕೊಂಡು ನಿಲ್ಲಬೇಕು, ದೇಶವನ್ನು ಪ್ರತಿನಿಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಬೇಕು ಎಂದು ಅನಿಸುತ್ತದೆ. ಜೈ ಹಿಂದ್~ ಎಂದು ಅವರು ಸಂದೇಶವನ್ನು ಹರಿಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry