ಮತ್ತೆ ಭಾರತ ಪ್ರವಾಸಕ್ಕೆ ಮಿಶೆಲ್ ಒಬಾಮ ಇಂಗಿತ

7

ಮತ್ತೆ ಭಾರತ ಪ್ರವಾಸಕ್ಕೆ ಮಿಶೆಲ್ ಒಬಾಮ ಇಂಗಿತ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತಕ್ಕೆ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಪುಳಕಿತರಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮಾ ತಮ್ಮ ಪುತ್ರಿಯರಾದ ಸಾಶಾ ಮತ್ತು ಮಲಿಯಾ ಅವರ ಜೊತೆ ಮತ್ತೆ ಭಾರತಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.ವೈಟ್‌ಹೌಸ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹಗಾರ ಶಿವಶಂಕರ್ ಮೆನನ್ ಮತ್ತು ಅಮೆರಿಕದ ಭದ್ರತಾ ಸಲಹಗಾರ ಟಾಮ್ ಡೊನಿಲೊನ್ ಅವರೊಂದಿಗೆ ಸಭೆ ನಡೆಸಿದ ವೇಳೆ ಅಧ್ಯಕ್ಷ ಬರಾಕ್ ಒಬಾಮ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.ಭಾರತದೆಡೆ ಆಕರ್ಷಿತರಾಗಿರುವ ಮಿಶೆಲ್ ಪುತ್ರಿಯರೊಂದಿಗೆ ಮತ್ತೆ ಭಾರತ ಪ್ರವಾಸ ಕೈಗೊಳ್ಳುವ  ಇರಾದೆ ವ್ಯಕ್ತಪಡಿಸಿರುವುದನ್ನು ಒಬಾಮ ಅವರು ಮೆನನ್‌ಗೆ ತಿಳಿಸಿದ್ದಾರೆ.ಕಳೆದ ನವೆಂಬರ್‌ನಲ್ಲಿ ಒಬಾಮ ಪತ್ನಿ ಮಿಶೆಲ್ ಜೊತೆ ದೇಶಕ್ಕೆ ನೀಡಿದ ಭೇಟಿ ಸಂದರ್ಭದಲ್ಲಿಯೇ ಅವರ ಪುತ್ರಿಯರು ಆಗಮಿಸಬೇಕಿತ್ತು. ಆದರೆ ತರಗತಿಗಳು ನಡೆಯುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry