ಮತ್ತೆ ಲೈಂಗಿಕ ದೌರ್ಜನ್ಯ ಆರೋಪ

7

ಮತ್ತೆ ಲೈಂಗಿಕ ದೌರ್ಜನ್ಯ ಆರೋಪ

Published:
Updated:

ರಾಂಚಿ (ಪಿಟಿಐ): ಭಾರತ ಅಥ್ಲೆಟಿಕ್ ಫೆಡರೇಷನ್‌ನ (ಎಎಫ್‌ಐ) ತಾಂತ್ರಿಕ ಅಧಿಕಾರಿ ಅನು ಕುಮಾರ್ ವಿರುದ್ಧ ಮತ್ತೊಬ್ಬ ಅಥ್ಲೀಟ್ ಲೈಂಗಿಕ ದೌರ್ಜನ್ಯ ಆರೋಪವೆಸಗಿದ್ದಾರೆ.ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈ ಆರೋಪ ಮಾಡಿದ್ದು ಒರಿಸ್ಸಾದ ನಮಿತಾ ಸಮಾಲ್.ಎರಡು ದಿನಗಳ ಹಿಂದೆ ಅನು ವಿರುದ್ಧ ಉತ್ತರ ಪ್ರದೇಶದ ಅಥ್ಲೀಟ್ ಪ್ರಿಯಾಂಕ ಪನ್ವಾರ್ ಕೂಡ ಇದೇ ರೀತಿಯ ಆರೋಪವೆಸಗಿದ್ದರು.ಅನು ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ರೈಲ್ವೆ ಉದ್ಯೋಗಿ ಆಗಿರುವ ನಮಿತಾ ದೂರಿದ್ದಾರೆ.ಅವರು 2008ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಆದರೆ ಈ ಆರೋಪವನ್ನು ಕುಮಾರ್ ಅಲ್ಲಗಳೆದಿದ್ದಾರೆ. ಈಗಾಗಲೇ ಭಾರತ ಅಥ್ಲೆಟಿಕ್ ಫೆಡರೇಷನ್‌ನ (ಎಎಫ್‌ಐ) ರಚಿಸಿರುವ ತನಿಖಾ ಆಯೋಗದ ಮುಂದೆ ತಮ್ಮ ಹೇಳಿಕೆ ನೀಡಲು ಸಿದ್ಧರಿರುವುದಾಗಿ ಅವರು ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry