ಮಂಗಳವಾರ, ಮೇ 24, 2022
30 °C

ಮತ್ತೆ ಸಚಿನ್ ಭೇಟಿ: ಶೂಮೇಕರ್ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರೇಟರ್ ನೋಯ್ಡಾ (ಐಎಎನ್‌ಎಸ್): ಫಾರ್ಮುಲಾ ಒನ್ ಚಾಲಕ ಮೈಕಲ್ ಶೂಮೇಕರ್ ಮತ್ತೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.ಭಾನುವಾರ ನಡೆಯಲಿರುವ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ-1 ರೇಸ್‌ನಲ್ಲಿ ಶೂಮೇಕರ್ ಮರ್ಸಿಡಿಸ್ ಬೆಂಜ್ ತಂಡದ ಕಾರು ಚಾಲನೆ ಮಾಡಲಿದ್ದಾರೆ. ಜರ್ಮನಿಯ ಚಾಲಕ ಈ ಹಿಂದೆ ಸಚಿನ್ ಅವರನ್ನು ಭೇಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.2002 ರಲ್ಲಿ ಇವರು ಮೊದಲ ಬಾರಿ ಪರಸ್ಪರ ಭೇಟಿಯಾಗಿದ್ದರು. ಆ ಸಂದರ್ಭ ಶೂಮೇಕರ್ ಭಾರತದ ಬ್ಯಾಟ್ಸ್‌ಮನ್‌ಗೆ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಡ್ರಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳನ್ನು ಸರಿಗಟ್ಟಿದ ಸಾಧನೆ ಮಾಡಿದ್ದಕ್ಕೆ ಸಚಿನ್‌ಗೆ ಕಾರನ್ನು ನೀಡಿದ್ದರು.ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಭಾನುವಾರ ಸಚಿನ್ ಅವರನ್ನು ಭೇಟಿಯಾಗುವ ನಿರೀಕ್ಷೆ ಹೊಂದಿದ್ದೇನೆ ಎಂಬುದು ಶೂಮೇಕರ್ ಹೇಳಿಕೆ. ಎಫ್-1 ರೇಸ್‌ನ ಅಭಿಮಾನಿಯಾಗಿರುವ ಸಚಿನ್ ರೇಸ್ ವೀಕ್ಷಿಸಲಿದ್ದಾರೆ.

`ಸಚಿನ್ ಭೇಟಿಯ ಮಧುರ ನೆನಪು ಈಗಲೂ ಇದೆ. ಇಬ್ಬರೂ ಪರಸ್ಪರ ಭೇಟಿಯಾಗಿ ಹಲವು ವರ್ಷಗಳೇ ಕಳೆದಿವೆ. ಅವರನ್ನು ಮತ್ತೊಮ್ಮೆ ಭೇಟಿಯಾಗುವುದು ನನ್ನ ಆಶಯ~ ಎಂದು ತಿಳಿಸಿದರು.ಶೂಮೇಕರ್ ಭೇಟಿಯನ್ನು ಎದುರುನೋಡುತ್ತಿರುವುದಾಗಿ ಸಚಿನ್ ಕೂಡಾ ತಿಳಿಸಿದ್ದಾರೆ. `ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನ್ನು ಕುತೂಹಲದಿಂದ ಕಾಯುತ್ತಿದ್ದೇನೆ. ನಾನು ರೇಸ್‌ನಲ್ಲಿ ಫೋರ್ಸ್ ಇಂಡಿಯಾ ತಂಡಕ್ಕೆ ಬೆಂಬಲ ಸೂಚಿಸುವೆ. ನನಗೆ ಮೈಕಲ್ ಶೂಮೇಕರ್ ಅವರಂತಹ ಗೆಳೆಯರಿದ್ದಾರೆ. ಆದರೂ ಭಾರತದ ತಂಡ ಎಂಬ ಕಾರಣ ಫೋರ್ಸ್ ಇಂಡಿಯಾವನ್ನು ಬೆಂಬಲಿಸುತ್ತೇನೆ~ ಎಂದು ಸಚಿನ್ ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.