ಬುಧವಾರ, ಜೂನ್ 16, 2021
23 °C

ಮತ್ತೆ ಹೈಟೆಕ್ ಪಾರ್ಕಿಂಗ್ ಜಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಹೈಟೆಕ್ ಪಾರ್ಕಿಂಗ್ ಜಪ

ಹುಬ್ಬಳ್ಳಿ: ಹೈಟೆಕ್ ಪಾರ್ಕಿಂಗ್ ಬಹುಮಹಡಿ ಕಟ್ಟಡ, ಸೂಪರ್ ಮಾರುಕಟ್ಟೆ ಹಾಗೂ ಮಹಾತ್ಮಾ ಗಾಂಧಿ ಮಾರುಕಟ್ಟೆ ನಿರ್ಮಾಣ, ಗಣೇಶಪೇಟೆ ಮೀನು ಮಾರುಕಟ್ಟೆ ಸ್ಥಳಾಂತರ, ಕೆರೆಗಳ ಅಭಿವೃದ್ಧಿ, ಪಾಲಿಕೆಯಲ್ಲಿ ವಿಲೀನಗೊಂಡ ಹಳ್ಳಿಗಳಿಗೆ ಸೌಕರ್ಯ, ಉಳಿದ ವಾರ್ಡ್‌ಗಳಲ್ಲೂ ನಿರಂತರ ನೀರು ಪೂರೈಕೆ...ಕಳೆದ ಹಲವು ವರ್ಷಗಳ ಬಜೆಟ್‌ನಲ್ಲಿ ಸಾಮಾನ್ಯವಾದ ಹಲವು ಸಂಗತಿ ಗಳು ಪ್ರಸಕ್ತ ವರ್ಷದ ಬಜೆಟ್‌ನಲ್ಲೂ ಮತ್ತೆ ಸ್ಥಾನ ಪಡೆದಿವೆ. ಕೋರ್ಟ್ ಮುಂದಿನ ನಿವೇಶನದಲ್ಲಿ ಹೈಟೆಕ್ ಪಾರ್ಕಿಂಗ್ ಬಹುಮಹಡಿ ಕಟ್ಟಡ ನಿರ್ಮಾಣದ ಪ್ರಸ್ತಾವವನ್ನು ಪುನಃ ಮಾಡಲಾಗಿದ್ದು, ಖಾಸಗಿ ಸಹಭಾಗಿತ್ವ ದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.ಮಾರುಕಟ್ಟೆಗಳ ಅಭಿವೃದ್ಧಿ ವಿಷಯ ಕಳೆದ ನಾಲ್ಕು ವರ್ಷಗಳ ಬಜೆಟ್‌ನಿಂದ ಪ್ರಸ್ತಾಪಗೊಳ್ಳುತ್ತಲೇ ಇದ್ದು, ಈ ಸಲವೂ ಹೊಸ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಲಾಗಿದೆ. ಆದರೆ, ಯಾವ ಮೂಲದಿಂದ ಹಣ ಹೊಂದಿಸ ಲಾಗುತ್ತದೆ ಎಂಬುದರ ಪ್ರಸ್ತಾವ ಇಲ್ಲ.

 

ಗಣೇಶಪೇಟೆ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಲಾಗುವುದು ಎಂಬ ಭರವಸೆಯನ್ನು ಈ ಸಲದ ಮುಂಗಡ ಪತ್ರದಲ್ಲೂ ನೀಡಲಾಗಿದೆ.ಪಾಲಿಕೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರ ಭಾಗ ವಹಿಸುವಿಕೆ ಹೆಚ್ಚಿಸಲು ಸಹಭಾಗಿತ್ವ ಯೋಜನೆ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದ್ದು, ವಾರ್ಡ್ ಸಮಿತಿ ಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ರೂ 25 ಲಕ್ಷ ಎತ್ತಿಡಲಾಗಿದೆ.

 

ನಾಲಾ ದುರಸ್ತಿ ವಿಷಯವಾಗಿಯೂ ಮುಂಗಡ ಪತ್ರದಲ್ಲಿ ಪ್ರಸ್ತಾವ ಮಾಡಲಾಗಿದ್ದು, ಅದಕ್ಕಾಗಿ ಯಾವುದೇ ಹಣ ಮೀಸಲಿಟ್ಟಿಲ್ಲ. ಮೇಯರ್ ವಿವೇಚನಾ ನಿಧಿಗೆ ರೂ 1 ಕೋಟಿ ಮತ್ತು ಉಪ ಮೇಯರ್ ವಿವೇಚನಾ ನಿಧಿಗೆ ರೂ 50 ಲಕ್ಷ ಕಾಯ್ದಿರಿಸಲಾಗಿದೆ.ಟೌನ್‌ಹಾಲ್ ಮತ್ತು ಈಜುಗೊಳಗಳ ಅಭಿವೃದ್ಧಿಗೂ ಹಣ ಎತ್ತಿಡಲಾಗಿದೆ. ಧಾರವಾಡದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಉದ್ದೇಶಿಸ ಲಾಗಿದೆ. ಅವಳಿನಗರದ ಉಳಿದ ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ವ್ಯವಸ್ಥೆ ಮಾಡಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.ಹಳೇ ಹುಬ್ಬಳ್ಳಿ ಮತ್ತು ನ್ಯೂ ಇಂಗ್ಲಿಷ್ ಶಾಲೆ ರಸ್ತೆ ಮಧ್ಯದಲ್ಲಿ ಬರುವ ನೂರು ವರ್ಷಗಳ ಹಳೆಯ ಸೇತುವೆಯನ್ನು ಅಭಿವೃದ್ಧಿಪಡಿಸಲು ರೂ 40 ಲಕ್ಷ ಮೀಸಲಿಡಲಾಗಿದೆ.ಪಾಲಿಕೆ ವ್ಯಾಪ್ತಿಯ ಪ್ರತಿ ಕಟ್ಟಡ ತೆರಿಗೆ ಜಾಲಕ್ಕೆ ಒಳಪಡಬೇಕು, ಕಟ್ಟಡ ಪರವಾನಗಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ರಸ್ತೆ ಬಳಸಿ ಪೆಂಡಾಲ್ ಹಾಕಲು ಪಾಲಿಕೆ ಅನುಮತಿ ಪಡೆಯುವುದನ್ನು ಕಡ್ಡಾಯ ಗೊಳಿಸಬೇಕು, ಪಾಲಿಕೆ ತುಂಡು ಭೂಮಿಗಳ ದಾಖಲೆ ಮಾಡಬೇಕು ಎಂಬ ಸಲಹೆಗಳನ್ನು ಮುಂಗಡ ಪತ್ರದಲ್ಲಿ ನೀಡಲಾಗಿದೆ.ಜಲಮಂಡಳಿಗೆ ಕೊರತೆ ಬಜೆಟ್ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗಾಗಿ 2012-13ನೇ ಸಾಲಿಗೆ ರೂ 78 ಲಕ್ಷದ ಮೊತ್ತದ ಕೊರತೆ ಮುಂಗಡ ಪತ್ರವನ್ನು ಬುಧವಾರ ಮಂಡಿಸಲಾಯಿತು.ಒಟ್ಟಾರೆ ರೂ 41.95 ಕೋಟಿ ವರಮಾನ ನಿರೀಕ್ಷಿಸಲಾಗಿದ್ದು, ಖರ್ಚಿನ ಬಾಬಿಗೆ ರೂ 42.73 ಕೋಟಿ ಅಗತ್ಯ ಎಂಬ ಅಂದಾಜು ಮಾಡಲಾಗಿದೆ. ಆದಾಯ ಕ್ರೋಢೀಕರಣದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ವೆಚ್ಚದಲ್ಲಿ ಸಾಧ್ಯವಿದ್ದಷ್ಟು ಮಿತವ್ಯಯ ಸಾಧಿಸಬೇಕು ಎಂಬ ಸಲಹೆಯನ್ನು ಜಲ ಮಂಡಳಿ ಅಧಿಕಾರಿಗಳಿಗೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.