ಸೋಮವಾರ, ಡಿಸೆಂಬರ್ 16, 2019
18 °C

ಮತ್ತೆ 5 ಹೊಸ ಕಾರು: ಹೋಂಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗಾಗಲೇ ಬ್ರಿಯೊ, ಸಿಟಿ, ಅಕಾರ್ಡ್ ಮತ್ತು ಸಿಆರ್-ವಿ ಮಾದರಿಗಳನ್ನು ಭಾರತದ ರಸ್ತೆಗಿಳಿಸಿರುವ ಜಪಾನ್ ಕಾರು ಕಂಪೆನಿ `ಹೋಂಡಾ', ಮುಂದಿನ 3 ವರ್ಷದಲ್ಲಿ 5 ಹೊಸ ಕಾರು ಪರಿಚಯಿಸುವುದಾಗಿ ಹೇಳಿದೆ.ರಾಜ್ಯದ ಮಾರುಕಟ್ಟೆಗೆ `ಅಮೇಜ್' ಡೀಸೆಲ್-ಪೆಟ್ರೋಲ್ ಕಾರು ಬಿಡುಗಡೆ ಮಾಡಿದ `ಹೋಂಡಾ ಕಾರ್ಸ್ ಇಂಡಿಯ ಲಿ.' ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 50 ಸಾವಿರ `ಅಮೇಜ್' ಕಾರು ಮಾರಾಟ ಮಾಡುವ ವಿಶ್ವಾಸವಿದೆ ಎಂದರು.ಉತ್ತರ ಪ್ರದೇಶದ ಗ್ರೇಟರ್ ನೊಯಿಡಾ, ರಾಜಸ್ತಾನದ ಅಲ್ವಾರಾ ಜಿಲ್ಲೆ ಘಟಕದಲ್ಲಿ ಸದ್ಯ ತಿಂಗಳಿಗೆ 4ರಿಂದ 5 ಸಾವಿರ ಅಮೇಜ್ ಕಾರು ತಯಾರಿಸಬಹುದಾಗಿದೆ. ಹಾಗಾಗಿ ಮಾರಾಟ ಗುರಿಯನ್ನು ತಯಾರಿಕೆ ಸಾಮರ್ಥ್ಯಕ್ಕೆ ತಕ್ಕಂತೆಯೇ ಇಟ್ಟುಕೊಳ್ಳಲಾಗಿದೆ ಎಂದರು.ಕೇರಳ, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಡೀಸೆಲ್ ಕಾರಿಗೆ ಭಾರಿ ಬೇಡಿಕೆ ಇದ್ದು, `ಅಮೇಜ್' ಡೀಸೆಲ್ ಮಾದರಿ ಇಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ `ಅಮೇಜ್'  ಪೆಟ್ರೋಲ್ ಕಾರು (6 ಮಾದರಿ) ಎಕ್ಸ್‌ಷೋರೂಂ ಬೆಲೆರೂ5.09 ಲಕ್ಷದಿಂದ 7.64 ಲಕ್ಷ, ಡೀಸೆಲ್(4) ಮಾದರಿಗೆರೂ6.20 ಲಕ್ಷದಿಂದ 7.73 ಲಕ್ಷವಿದೆ.

ಪ್ರತಿಕ್ರಿಯಿಸಿ (+)