ಮತ್ತೆ 9 ತುರಂತ್, 3 ಶತಾಬ್ದಿ ಎಕ್ಸ್‌ಪ್ರೆಸ್

7

ಮತ್ತೆ 9 ತುರಂತ್, 3 ಶತಾಬ್ದಿ ಎಕ್ಸ್‌ಪ್ರೆಸ್

Published:
Updated:

ನವದೆಹಲಿ (ಪಿಟಿಐ): ಒಂಬತ್ತು ತುರಂತ್ ಎಕ್ಸ್‌ಪ್ರೆಸ್, ಮೂರು ಶತಾಬ್ದಿ ಹಾಗೂ ಎರಡು ಮಾರ್ಗಗಳಲ್ಲಿ ಹವಾ ನಿಯಂತ್ರಿತ ಡಬಲ್ ಡೆಕರ್ ರೈಲುಗಳ ಓಡಾಟವನ್ನು ಮಮತಾ ಬ್ಯಾನರ್ಜಿ ಪ್ರಕಸಿದ್ದಾರೆ.ಪುಣೆ-ಸಿಕಂದರಾಬಾದ್ ನಡುವೆ ಸಂಚರಿಸಲಿರುವ ನೂತನ ಶತಾಬ್ದಿ ಎಕ್ಸ್‌ಪ್ರೆಸ್ ಈ ಮಾರ್ಗದ ಸಂಪರ್ಕ ಕೊಂಡಿಯಾಗಲಿದ್ದು, ಜೈಪುರ-ಆಗ್ರಾ ಮತ್ತು ಲೂಧಿಯಾನ-ದೆಹಲಿ ನಡುವೆ ಇನ್ನೆರಡು ಶತಾಬ್ದಿಗಳು ಸಂಚರಿಸಲಿವೆ. ಜೈಪುರ-ದೆಹಲಿ ಮತ್ತು ಅಹಮದಾಬಾದ್-ಮುಂಬೈ ನಡುವೆ ಹವಾನಿಯಂತ್ರಿತ ಡಬಲ್ ಡೆಕರ್ ರೈಲು ಓಡಲಿದೆ.2013ರಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮನಾಚರಣೆ ನಡೆಯಲಿದ್ದು ಈ ನಿಮಿತ್ತ ‘ವಿವೇಕ್ ಎಕ್ಸ್‌ಪ್ರೆಸ್’ ಎಂಬ ಹೆಸರಿನ ರೈಲುಗಳನ್ನು ಓಡಿಸಲು ಪ್ರಸಕ್ತ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ ಎಂದು ಮಮತಾ ತಿಳಿಸಿದರು. ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ‘ಕವಿಗುರು ಎಕ್ಸ್‌ಪ್ರೆಸ್’ ಹೆಸರಿನಲ್ಲಿ ನಾಲ್ಕು ರೈಲುಗಳ ಸಂಚಾರವನ್ನು ಮಮತಾ ಪ್ರಕಟಿಸಿದ್ದಾರೆ. ಹೊಸ ತುರಂತ್ ಎಕ್ಸ್‌ಪ್ರೆಸ್ ರೈಲುಗಳು 

*ಅಲಹಾಬಾದ್-ಮುಂಬೈ 

    (ಎರಡು ವಾರಕ್ಕೊಮ್ಮೆ)

*ಪುಣೆ-ಅಹಮದಾಬಾದ್                 

    (ಮೂರು ವಾರಕ್ಕೊಮ್ಮೆ)

*ಸಿಕಂದರಾಬಾದ್-ವಿಶಾಖಪಟ್ಟಣಂ

   (ಮೂರು ವಾರಕ್ಕೊಮ್ಮೆ)

*ಚೆನ್ನೈ-ತಿರುವನಂತಪುರಂ                 

    (ಎರಡು ವಾರಕ್ಕೊಮ್ಮೆ)

*ಮುಂಬೈ ಸೆಂಟ್ರಲ್-ನವದೆಹಲಿ            

    (ಎರಡು ವಾರಕ್ಕೊಮ್ಮೆ)

*ನಿಜಾಮುದ್ದೀನ್-ಅಜ್ಮೀರ್                    

   (ಎರಡು ವಾರಕ್ಕೊಮ್ಮೆ) 

*ಶಾಲಿಮಾರ್-ಪಟ್ನಾ                          

  (ಮೂರು ವಾರಕ್ಕೊಮ್ಮೆ)ವಿವೇಕ್ ಎಕ್ಸ್‌ಪ್ರೆಸ್’ ಹೆಸರಿನ ಮೊದಲ ನಾಲ್ಕು ರೈಲುಗಳು

*ಪಾಲಕ್ಕಾಡ್ ಮಾರ್ಗವಾಗಿ ಹೌರಾ-ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

*ಕೋಕ್ರಜಾರ್ ಮಾರ್ಗವಾಗಿ ದಿಬ್ರೂಗಡ-ತಿರುವನಂತಪುರ-ಕನ್ಯಾಕುಮಾರಿ ಎಕ್ಸ್‌ಪ್ರೆಸ್   (ವಾರಕ್ಕೊಮ್ಮೆ)

*ವಾಡಿ ಮಾರ್ಗವಾಗಿ ದ್ವಾರಕಾ-ತೂತುಕುಡಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

*ಮರ್ವಾಡ್-ದೇಗನಾ-ರತನ್‌ಗಡ-ಜಖಾಲ್-ಲೂಧಿಯಾನ ಮಾರ್ಗವಾಗಿ ಬಾಂದ್ರಾ-ಜಮ್ಮು  ತಾವಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry