ಮತ್ತೊಂದು ದಾಖಲೆಯತ್ತ ಮಾಸ್ಟರ್ ಕಿಶನ್ ಚಿತ್ತ!

7

ಮತ್ತೊಂದು ದಾಖಲೆಯತ್ತ ಮಾಸ್ಟರ್ ಕಿಶನ್ ಚಿತ್ತ!

Published:
Updated:
ಮತ್ತೊಂದು ದಾಖಲೆಯತ್ತ ಮಾಸ್ಟರ್ ಕಿಶನ್ ಚಿತ್ತ!

ಗುಲ್ಬರ್ಗ: ಅತೀ ಚಿಕ್ಕ ವಯಸ್ಸಿನಲ್ಲೇ `ಕೇರ್ ಆಫ್ ಪುಟ್ ಪಾತ್~ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದ ಮಾಸ್ಟರ್ ಕಿಶನ್ ಇದೀಗ ಮತ್ತೊಂದು ಗಿನ್ನಿಸ್ ದಾಖಲೆ ಮಾಡಲು ಹೊರಟಿದ್ದಾರೆ.`ಲಾರ್ಜೆಸ್ಟ್ ಸಾಂಗ್ ಆ್ಯಂಡ್ ಡ್ಯಾನ್ಸ್~ ಎಂಬ ಶಿರೋನಾಮೆ ಅಡಿಯಲ್ಲಿ ಕರ್ನಾಟಕದ ಎಲ್ಲ ಶಾಲೆಗಳಿಗೆ ಭೇಟಿ ಮಾಡಿ ಮಕ್ಕಳನ್ನು ಹುರಿದುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ತನ್ನಿಮಿತ್ತ ಸೋಮವಾರ ಗುಲ್ಬರ್ಗದ ಎಸ್.ಆರ್. ಎನ್. ಮೆಹತಾ ಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದರು.ಈ ಮುಂಚೆ ಕೇವಲ ನನ್ನ ಹೆಸರಲ್ಲಿ ಮಾತ್ರ ಗಿನ್ನಿಸ್ ದಾಖಲೆ ಇತ್ತು. ಅದರ ಪ್ರಮಾಣಪತ್ರ ನನ್ನ ಮನೆಯಲ್ಲಿ ಮಾತ್ರ ಇದೆ. ಇಂತಹ ದಾಖಲೆಯಲ್ಲಿ ನಾಡಿನ ಎಲ್ಲ ಎಳೆಯ ಮಕ್ಕಳ ಹೆಸರಿರಬೇಕು ಎನ್ನುವ ಉದ್ದೇಶದಿಂದ ಈ ಸಾಹಸಕ್ಕೆ ಕೈ ಹಾಕಿದ್ದೇನೆ.ಈ ಹಿಂದೆ ಐರ‌್ಲೆಂಡ್ ದೇಶದ ಹತ್ತು ಸಾವಿರ ಜನರು ಹಾಡೊಂದಕ್ಕೆ ಏಕ ಕಾಲದಲ್ಲಿ ಎಲ್ಲರೂ ಒಟ್ಟಾಗಿ ನೃತ್ಯ ಮಾಡಿದ್ದು, ಗಿನ್ನಿಸ್ ದಾಖಲೆಯಾಗಿತ್ತು. ಈಗಾಗಲೇ ಐರ‌್ಲೆಂಡ್ ದೇಶದ ಹೆಸರಿನಲ್ಲಿರುವ ಗಿನ್ನಿಸ್ ದಾಖಲೆಯನ್ನು ಅಳಸಿಹಾಕಿ ಅಲ್ಲಿ ಕರ್ನಾಟಕದ ಹೊಸ ಹೆಸರನ್ನು ದಾಖಲಿಸುವ ಏಕಮೇವ ಇರಾದೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ.ಫೆ. 19ರಂದು ಕರ್ನಾಟಕದ ಎಲ್ಲೆಡೆ ಏಕಕಾಲದಲ್ಲಿ ನಡೆಯಲಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು 30 ಸಾವಿರ ಮಕ್ಕಳು `ಮಾರೋ ಮಾರೋ ಲೇ ನೀ ಬೌಂಡರಿ. ಹೊಡೆ ಸಂಚುರಿ ಮಗ ನಿಂದೇ ವಿಕ್ಟರಿ~ ಎನ್ನುವ ಹಾಡಿಗೆ ಅತ್ಯಂತ ವೈನಾಗಿ ಹೆಜ್ಜೆ ಹಾಕುವ ನಿರೀಕ್ಷೆ ಇದೆ.

 

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸಿ ತಮ್ಮ ಹೆಸರನ್ನೂ ಗಿನ್ನಿಸ್ ದಾಖಲೆಯಲ್ಲಿ ಅಜರಾಮರವಾಗಿಸಲಿ. ಈಗಾಗಲೇ ಬೀದರ್ ಪ್ರವಾಸ ಮುಗಿಸಿ ಬಂದಿದ್ದು, ಗುಲ್ಬರ್ಗದ ನಂತರ ಬಳ್ಳಾರಿ ಸೊಂಡೂರು ಮುಂತಾದೆಡೆ ಭೇಟಿ ನೀಡಲಿದ್ದೇನೆ.ಇಂದು ಎಲ್ಲ ಪಾಲಕರು ನನ್ನ ಮಗ ವೈದ್ಯನಾಗಬೇಕು, ಎಂಜಿನಿಯರ್ ಆಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ಸಾಧನೆಗೆ ವಿಸ್ತಾರವಾದ ಕ್ಷೇತ್ರವಿದೆ. ಜೀವನದಲ್ಲಿ ಗುರಿ ಇರಬೇಕು. ಆ ಗುರಿಯನ್ನು ಅನುಸರಿಸಿ ದೇಶದ ಪ್ರತಿಯೊಂದು ಮಗು ಒಂದೊಂದು ಸಾಧನೆ ಮಾಡಬೇಕು. ಅಂದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಇದೆಲ್ಲವನ್ನೂ ಮಕ್ಕಳಿಗೆ ಮನವರಿಕೆ ಮಾಡುತ್ತ ನಡೆದಿದ್ದೇನೆ.ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93ರಷ್ಟು ಅಂಕಗಳಿಸಿ ಉತ್ತೀರ್ಣನಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಿಂದ `ಮಲ್ಟಿ ಮೀಡಿಯಾ ಆ್ಯಂಡ್ ಅನಿಮೇಶನ್~ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ವಿಶೇಷ ಪ್ರವೇಶ ಪಡೆಯಲಿದ್ದೇನೆ.ಗ್ರಾಮ ದೇವತೆ ಎಂಬ ಸಿನಿಮಾದಿಂದ ಆರಂಭಿಸಿ ಸ್ವಾತಿ ಮುತ್ತು, ಚಂದು, ಜೋಗಿ, ಎಕ್ಸ್‌ಕ್ಯೂಸ್‌ಮಿ, ಕೇರ್ ಆಫ್ ಪುಟ್ ಪಾತ್ ಮುಂತಾದ 29 ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದೇನೆ. `ಟೀನ್ ಏಜ್ ಈ ವಯಸ್ಸೇ ಒಂಥರಾ!~ ಎನ್ನುವುದು ನನ್ನ 30ನೇ ಚಿತ್ರ. 31ನೇ ಚಿತ್ರದಲ್ಲಿ `ತ್ರೀಡಿ~ ತಂತ್ರಜ್ಞಾನದ ನಿರ್ದೇಶಕನಾಗಿ ಹೊರ ಹೊಮ್ಮಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry