ಬುಧವಾರ, ಜೂನ್ 23, 2021
30 °C

ಮತ್ತೊಬ್ಬಳು ರಕ್ಷಿತಾ !

ರಮೇಶ ಕೆ. Updated:

ಅಕ್ಷರ ಗಾತ್ರ : | |

ಡಿಪ್ಲೊಮಾ ಮಾಡಿದ ವಿದ್ಯಾರ್ಥಿನಿಯನ್ನು ಆಕರ್ಷಿಸಿದ್ದು ಮಾಡೆಲಿಂಗ್‌ ಕ್ಷೇತ್ರ. ಹೈ ಹೀಲ್ಸ್‌ ಹಾಕಿಕೊಂಡು ಒಮ್ಮೆಯೂ ನಡೆದ ಅನುಭವ ಇಲ್ಲದ ಇವರಿಗೆ ರ್‌್ಯಾಂಪ್‌ ಷೋ ಒಂದರಲ್ಲಿ ರೂಪದರ್ಶಿಯಾಗಿ ಹೆಜ್ಜೆ ಹಾಕುವ ಅವಕಾಶವೂ ಒದಗಿಬಂದಿತು.ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇದುವರೆಗೂ 400ಕ್ಕೂ ಹೆಚ್ಚು ರ್‌್ಯಾಂಪ್‌ ಷೋಗಳಲ್ಲಿ ಕ್ಯಾಟ್‌ವಾಕ್‌ ಮಾಡಿದವರು ರೂಪದರ್ಶಿ ರಕ್ಷಿತಾ ಸುನೈನಾ.ಮೂಲತಃ ತುಮಕೂರಿನವರಾದ ರಕ್ಷಿತಾ ಡಿಪ್ಲೊಮಾ (ಕಂಪ್ಯೂಟರ್‌ ಸೈನ್ಸ್‌) ಮಾಡಿದ್ದು ಚಿತ್ರದುರ್ಗದ ಎಸ್‌ಜೆಎಂಐಟಿಯಲ್ಲಿ. ನಂತರ ಬೆಂಗಳೂರಿಗೆ ಬಂದ ಇವರು ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಐಡಿಯಾ ಫ್ಯಾಷನ್‌ ಡಿಸೈನ್‌ ಕಾಲೇಜಿನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಅಭ್ಯಾಸ ಮಾಡಿದರು.‘ಅಮ್ಮನ ಆಸೆಯಂತೆ ರೂಪದರ್ಶಿಯಾಗಬೇಕೆಂಬ ಬಯಕೆಯೊಂದಿಗೆ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಸೇರಿಕೊಂಡೆ. ರೂಪದರ್ಶಿಯಾಗುವುದಕ್ಕೂ ಮುಂಚೆ ಮಾಡಿದ್ದು ಟೀವಿ ವಾಹಿನಿಯೊಂದರಲ್ಲಿ ನಿರೂಪಕಿ ಉದ್ಯೋಗ. ಅಲ್ಲಿ ‘ಶುಭೋದಯ’, ‘ಪತ್ರಕ್ಕೊಂದು ಫೋನ್‌’ ಎಂಬ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದೆ. ಒಮ್ಮೆ ಪ್ರಸಾದ್‌ ಬಿದಪ್ಪ ಅವರ ‘ಮೆಗಾ ಮಾಡೆಲ್‌ ಹಂಟ್‌’ ಫ್ಯಾಷನ್‌ ಷೋನಲ್ಲಿ ಹೆಜ್ಜೆ ಹಾಕುವ ಅವಕಾಶ ನನ್ನದಾಯಿತು.ಎತ್ತರದ ಚಪ್ಪಲಿ ಹಾಕಿಕೊಂಡು ನಡೆಯಲೂ ಬಾರದ ನನಗೆ ರ್‌್್ಯಾಂಪ್‌ ಮೇಲೆ ಮಿಂಚುತ್ತೇನೆ ಎಂಬ ಭರವಸೆಯಿತ್ತು. ದುಬೈನಿಂದ ಬಂದಿದ್ದ ಕೋರಿಯೋಗ್ರಾಫರ್‌ ಕೆವಿನ್ ಹಾಲಿವರ್‌ ಒಂದು ತಿಂಗಳ ತರಬೇತಿ ನೀಡಿದರು. ಹೀಲ್ಸ್‌ ಹಾಕಿಕೊಂಡು ನಡೆಯುವುದು ಹೇಗೆ, ರ್‌್ಯಾಂಪ್‌ ಮೇಲೆ ಹೆಜ್ಜೆ ಹಾಕುವಾಗ ಗಮನಿಸಬೇಕಾದ ಅಂಶಗಳು ಯಾವುವು ಇತ್ಯಾದಿ ಸಲಹೆಗಳನ್ನು ಕೊಟ್ಟರು.ಮೊದಲ ಷೋನಲ್ಲಿ ಹೆಜ್ಜೆ ಹಾಕಿದ ಆ ಕ್ಷಣ ಭಯವಾಗಿತ್ತು. ಆದರೆ ಖುಷಿಯೂ ಆಯಿತು. ಅಮ್ಮನ ಆಸೆಯಂತೆ ರೂಪದರ್ಶಿಯಾದೆ. ಇದುವರೆಗೂ 400ಕ್ಕೂ ಹೆಚ್ಚು ಷೋಗಳಲ್ಲಿ ಮಿಂಚಿದ್ದೇನೆ. ಮನೀಷ್‌ ಮಲ್ಹೋತ್ರಾ, ಅಸ್ಲಾಂ ಖಾನ್‌, ಜಯಾ ಮಿಶ್ರಾ ಹಾಗೂ ರಮೇಶ್‌ ದೆಂಬ್ಲಾ ಅವರ ಸಂಗ್ರಹಗಳು ಇಷ್ಟವಾಗುತ್ತವೆ. ಒಬ್ಬೊಬ್ಬರೂ ವಿಶೇಷ. ಥೀಮ್‌ ಇಟ್ಟುಕೊಂಡು ಮಾಡುವ ಅವರ ಸಂಗ್ರಹಗಳು ಬಗೆಬಗೆಯ ಅರ್ಥ ಕೊಡುವಂತಿರುತ್ತವೆ’ ಎನ್ನುತ್ತಾರೆ ರೂಪದರ್ಶಿ ರಕ್ಷಿತಾ ಸುನೈನಾ.ಕಳೆದ ನಾಲ್ಕು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುತ್ತಿರುವ ರಕ್ಷಿತಾ ಈಗ ಹೈದರಾಬಾದ್‌ನ ಫ್ಯಾಷನ್‌ ಶಾಲೆಯೊಂದರಲ್ಲಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ರೂಪದರ್ಶಿಯರು ಬರುವ ಎಲ್ಲಾ ಅವಕಾಶಗಳನ್ನು ಒಪ್ಪಿಕೊಳ್ಳಬಾರದು, ಪ್ರೊಫೈಲ್ ನೋಡಿ ಆಯ್ಕೆ ಮಾಡಿಕೊಳ್ಳಬೇಕು. ಷೋನ ಗುಣಮಟ್ಟವೂ ಮುಖ್ಯವಾಗುತ್ತದೆ. ಅದು ಒಬ್ಬ ರೂಪದರ್ಶಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡುತ್ತಾರೆ ರಕ್ಷಿತಾ.ರಕ್ಷಿತಾ ಸುನೈನಾ ಅವರಿಗೆ ಕನ್ನಡ ಸಿನಿಮಾಗಳಲ್ಲೂ ನಟಿಸುವ ಅವಕಾಶ ಒದಗಿಬಂದಿತ್ತಂತೆ. ಆದರೆ ಸಿನಿಮಾ ಒಲ್ಲದ ಇವರು ರೂಪದರ್ಶಿಯಾಗಿಯೇ ಮಿಂಚುವ ಗುರಿ ಹೊಂದಿದ್ದು, ಒಳ್ಳೆಯ ಗೃಹಿಣಿಯಾಗಬೇಕು ಎಂದುಕೊಂಡಿದ್ದಾರೆ.ದೇಹದ ಸೌಂದರ್ಯ ಕಾಪಿಟ್ಟುಕೊಳ್ಳಲು ದಿನಕ್ಕೆ ಎರಡು ಗಂಟೆ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. ‘ಆಬ್ಸ್‌ ಜೊತೆಗೆ ಕಾರ್ಡಿಯೊ ವರ್ಕೌಟ್ ಮಾಡುತ್ತೇನೆ. ಡಯೆಟ್ ಮಾಡುವುದಿಲ್ಲ. ಚೆನ್ನಾಗಿ ತಿನ್ನುತ್ತೇನೆ. ಹಣ್ಣು, ಜ್ಯೂಸ್‌ ಹೆಚ್ಚಾಗಿರುತ್ತದೆ’ ಎಂದು ತಮ್ಮ ವರ್ಕೌಟ್‌ ಕುರಿತು ಮಾತು ಹಂಚಿಕೊಂಡರು ರಕ್ಷಿತಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.