ಮತ್ತೊಬ್ಬ ಉಗ್ರ ಹಂಜ ಹತ್ಯೆ

ಭಾನುವಾರ, ಜೂಲೈ 21, 2019
26 °C

ಮತ್ತೊಬ್ಬ ಉಗ್ರ ಹಂಜ ಹತ್ಯೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ವಜೀರಿಸ್ತಾನದಲ್ಲಿ ಅಮೆರಿಕ ಶುಕ್ರವಾರ ತಡರಾತ್ರಿ ನಡೆಸಿದ ಡ್ರೋಣ್ ದಾಳಿಯಲ್ಲಿ ಕುಖ್ಯಾತ ಭಯೋತ್ಪಾದಕ ಇಲ್ಯಾಸ್ ಕಾಶ್ಮೀರಿಯ ಜೊತೆಗೆ ಮತ್ತೊಬ್ಬ ಪ್ರಮುಖ ತಾಲಿಬಾನ್ ಕಮಾಂಡರ್ ಅಮೀರ್ ಹಂಜ ಸಹ ಸಾವಿಗೀಡಾಗಿದ್ದಾನೆ.ಈ ಪ್ರದೇಶದಲ್ಲಿರುವ ವಾನಾ ಪಟ್ಟಣಕ್ಕೆ ಸಮೀಪದ ಲಮನ್ ಎಂಬ ಗ್ರಾಮದಲ್ಲಿ ಕಾಶ್ಮೀರಿಯ ಜೊತೆ ಮೃತಪಟ್ಟ 9 ಉಗ್ರಗಾಮಿಗಳಲ್ಲಿ ಹಂಜ ಸೇರಿದ್ದಾನೆ.ಇತರ ಮೂವರು ಉಗ್ರರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ವಾನಾದ ನಿವಾಸಿಯಾಗಿದ್ದ ಹಂಜ, ತಾಲಿಬಾನ್‌ನ ಮುಲ್ಲಾ ನಜೀರ್ ಬಣದ ಕಮಾಂಡರ್ ಆಗಿದ್ದ. ನಜೀರ್ ಹಾಗೂ ಆತನ ಸಹಚರರು ತಮ್ಮ ಸಂಘಟನೆಯ ಹಿಡಿತ ಇರುವ ವಾನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂದು ಶಂಕಿಸಲಾಗಿದೆ.ಅಮೆರಿಕದಲ್ಲಿ ಬಂಧಿತನಾಗಿರುವ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ವಿಚಾರಣೆ ವೇಳೆ ಬಯಲುಗೊಳಿಸಿದ ಮಾಹಿತಿ ಕಾಶ್ಮೀರಿಯ ಇರವಿನ ಬಗ್ಗೆ ಅಮೆರಿಕದ ಪಡೆಗಳಿಗೆ ಸುಳಿವು ನೀಡಿತು ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry