ಮತ್ಸ್ಯಮೇಳ

7

ಮತ್ಸ್ಯಮೇಳ

Published:
Updated:

ಮೀನು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಮೀನಿನ ಖಾದ್ಯಗಳು ದೊಡ್ಡವರ ಬಾಯಲ್ಲಿ ನೀರೂರಿಸಿದರೆ, ಅಕ್ವೇರಿಯಂನಲ್ಲಿ ಈಜಾಡುವ ಬಣ್ಣದ ಮೀನುಗಳೆಂದರೆ ಮಕ್ಕಳಿಗೆ ಪಂಚಪ್ರಾಣ.ರಾಜ್ಯ ಮೀನುಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ  ಮೀನುಗಾರಿಕೆ ಅಭಿವೃದ್ದಿ ಮಂಡಳಿ ಶುಕ್ರವಾರದಿಂದ ಸೋಮವಾರದವರೆಗೆ ನಗರದಲ್ಲಿ ಏರ್ಪಡಿಸಿರುವ ಮತ್ಸ್ಯಮೇಳ  ಎಲ್ಲರಿಗೂ ಪ್ರಿಯವಾಗುವಂತಿದೆ.ಈ  ಮತ್ಸ್ಯಮೇಳ ಸಾಮಾನ್ಯರಿಗೆ ಮೀನುಗಾರಿಕೆ ಮತ್ತು ಮೀನು ಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಚಯಿಸುವುದರ ಜೊತೆಗೆ ರೈತರಿಗೆ, ಖಾಸಗಿ ಕಂಪನಿಗಳಿಗೆ, ವಿಜ್ಞಾನಿಗಳಿಗೆ ಜ್ಞಾನ ವಿನಿಮಯದ ವೇದಿಕೆಯಾಗಲಿದೆ.ಶುಕ್ರವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆ, ಅತಿಥಿಗಳು: ಸಚಿವರಾದ ಜೆ.ಕೃಷ್ಣ ಪಾಲೇಮಾರ್, ಆರ್.ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ವಿ.ಎಸ್. ಆಚಾರ್ಯ, ಬಿ. ಎನ್. ಬಚ್ಚೇಗೌಡ, ಶಾಸಕ ಡಾ. ಸಿ. ಎನ್. ಅಶ್ವಥನಾರಾಯಣ, ಮೇಯರ್ ಎಸ್.ಕೆ.ನಟರಾಜ್ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry