ಸೋಮವಾರ, ಮಾರ್ಚ್ 1, 2021
20 °C

ಮದುರೆ ಮಹಾಸಂಸ್ಥಾನಕ್ಕೆ ನಿತ್ಯಾನಂದ ಪೀಠಾಧಿಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುರೆ ಮಹಾಸಂಸ್ಥಾನಕ್ಕೆ ನಿತ್ಯಾನಂದ ಪೀಠಾಧಿಪತಿ

ಚನ್ನಪಟ್ಟಣ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಅವರು ತಮಿಳುನಾಡಿನ ಮದುರೆ ಅಧೀನಂ ಮಹಾಸಂಸ್ಥಾನಮಠದ 293ನೇ ಪೀಠಾಧಿಪತಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.ಬಿಡದಿಯ ಧ್ಯಾನ ಪೀಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧೀನಂ ಸಂಸ್ಥಾನದ 292ನೇ ಗುರು ಅರುಣಗಿರಿನಾಥ ಜ್ಞಾನ ಸಂಬಂಧ ಪರಮಾಚಾರ್ಯ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿಗೆ ಸುವರ್ಣಲೇಪಿತ ಕಿರೀಟ ತೊಡಿಸಿ, ದಂಡವನ್ನು ನೀಡುವ ಮೂಲಕ ಪೀಠದ ಅಧಿಕಾರವನ್ನು ನೀಡಿದರು.ಅಧಿಕಾರ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಸ್ವಾಮೀಜಿ, ಪ್ರಾಚೀನ ಪೀಠವಾದ ಅಧೀನಂ ಸಂಸ್ಥಾನಮಠದ ಅಧಿಕಾರ ದೊರೆತಿರುವುದು ಸಂತೋಷವಾಗಿದೆ. ಜತೆಗೆ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಮಠವನ್ನು ಸಾಂಸ್ಕೃತಿಕ ಮತ್ತು ಅಧ್ಯಾತ್ಮ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು. ಅಧಿಕಾರ ಹಸ್ತಾಂತರಿಸಿದ ಅಧೀನಂ ಸಂಸ್ಥಾನಮಠದ 292ನೇ ಗುರು ಅರುಣಗಿರಿನಾಥ ಜ್ಞಾನ ಸಂಬಂಧ ಪರಮಾಚಾರ್ಯ ಸ್ವಾಮೀಜಿ, ಮಠಕ್ಕೆ ಸೂಕ್ತ ವ್ಯಕ್ತಿಯೊಬ್ಬರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇದು ದೈವ ಪ್ರೇರಣೆಯಿಂದ ಸಾಧ್ಯವಾಗಿದೆ. ಯುವಕರಾಗಿರುವ ನಿತ್ಯಾನಂದ ಸ್ವಾಮೀಜಿ ಮಠವನ್ನು ಅಭಿವೃದ್ಧಿಗೊಳಿಸುತ್ತಾರೆ ಎಂಬ ಭರವಸೆಯಿದೆ ಎಂದು ಹೇಳಿದರು.ಹುಚ್ಚೆದ್ದ ಶಿಷ್ಯರು: 6ನೇ ಶತಮಾನದಲ್ಲಿ ಸ್ಥಾಪಿತವಾಗಿರುವ ದಕ್ಷಿಣ ಭಾರತದ ಪ್ರಾಚೀನ ಮಠ ಎಂಬ ಕೀರ್ತಿಗೆ ಪಾತ್ರವಾಗಿರುವ ಅಧೀನಂ ಮಠದ ಪೀಠಾಧಿಪತಿಯಾಗಿ ನಿತ್ಯಾನಂದ ಸ್ವಾಮೀಜಿ ಅಧಿಕಾರ ಸ್ವೀಕರಿಸುತ್ತಿದ್ದಂತೆ   ಶಿಷ್ಯರು ಹಾಗೂ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ನಿತ್ಯಾನಂದ ಸ್ವಾಮಿ, ಶಿವ ಹಾಗೂ ವಿಷ್ಣುವಿನ ಅವತಾರ ಎಂದು ಬಣ್ಣಿಸುತ್ತಿದ್ದಂತೆ ಜೈಕಾರ ಹಾಕಿ, ನರ್ತನ ಮಾಡಿ ಸಂಭ್ರಮಿಸಿದರು.ತಮಿಳು ನಟಿ ರಂಜಿತಾ ಕಾರ್ಯಕ್ರಮಕ್ಕೆ ಹಾಜರಾಗಿ ಗಮನ ಸೆಳೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.