ಶನಿವಾರ, ಮೇ 8, 2021
26 °C

ಮದುವೆಗೆ ನಕಾರ: ಪ್ರೇಯಸಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ. ನರಸೀಪುರ: ಪ್ರೀತಿಸಿದ ಯುವಕ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ನೊಂದ ಯುವತಿಯೊಬ್ಬಳು ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೊಳತೂರು ಗ್ರಾಮದ ಕೆರೆಯ ಬಳಿ ಮಂಗಳವಾರ ನಡೆದಿದೆ.ಮಳವಳ್ಳಿ ತಾಲ್ಲೂಕಿನ ಪೂರೀಗಾಲಿ ಗ್ರಾಮದ ಚಂದ್ರಯ್ಯ ಅವರ ಪುತ್ರಿ ಪಿ.ಸಿ. ತೇಜಸ್ವಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಎರಡು- ಮೂರು ವರ್ಷಗಳಿಂದ ಕೊಳತೂರು ಗ್ರಾಮದ ನಿಂಗಯ್ಯ ಅವರ ಪುತ್ರ ಉಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಮನೆಯವರಿಗೂ ಈ ವಿಚಾರ ತಿಳಿದಿತ್ತು ಹಾಗೂ ಮದುವೆಗೆ ಪೋಷಕರೂ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.ಈ ಮೊದಲು ಮದುವೆಗೆ ಒಪ್ಪಿದ್ದ ಉಮೇಶ್ ಇತ್ತೀಚೆಗೆ ಆಕೆಯನ್ನು ಬಯ್ಯುವುದು, ಅನುಮಾನ ಪಡುವುದು ಮಾಡುತ್ತಿದ್ದ. ಅಲ್ಲದೆ, ಮದುವೆ ಮಾಡಿಕೊಳ್ಳಲು ತೇಜಸ್ವಿನಿ ಮನವಿ ಮಾಡಿಕೊಂಡರೂ ನಿರಾಕರಿಸುತ್ತಿದ್ದ. ಇದರಿಂದ ಬೇಸತ್ತ ಆಕೆ ಕೊಳತೂರು ಗ್ರಾಮದ ಕೆರೆಯ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಸ್ಥಳಕ್ಕೆ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಸ್. ಸುಂದರ್‌ರಾಜ್ ಆಗಮಿಸಿ ಪರಿಶೀಲನೆ ನಡೆಸಿದರು. ತಲಕಾಡು ಪೊಲೀಸ್ ಠಾಣೆಯ ಹೆಚ್ಚುವರಿ ಪಿಎಸ್‌ಐ ಸುರೇಶ್‌ಕುಮಾರ್, ಎಎಸ್‌ಐ ರಾಜಣ್ಣ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.