ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್

7

ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್

Published:
Updated:
ಮದುವೆಮನೆಯಲ್ಲಿ ಜೆನಿಲಿಯಾ ರಿತೇಶ್

ನೋಡಲವಳು ಲವ್ಲಿ ಲವ್ಲಿ...ಈ ಹಾಡು ಕೇಳಿದಾಗಲೆಲ್ಲ ದೇಹವನ್ನು ಬಳ್ಳಿಯಂತೆ ಬಳುಕಿಸುವ ಮಂಗಳೂರು ಮೂಲದ ಬೆಡಗಿ ಜೆನಿಲಿಯಾ ಡಿಸೋಜ ಚಿತ್ರ ಕಣ್ಮುಂದೆ ಹಾದು ಹೋಗುತ್ತದೆ. ಪಿಂಕಿ ಪಿಂಕಿಯಾಗಿರೋ ಈ ಬಬ್ಲಿ ಹುಡುಗಿಯ ಹಿಡಿ ಪ್ರೀತಿಗಾಗಿ ಸಾವಿರಾರು ಹುಡುಗರು ಆಕೆಯ ಬೆನ್ನುಹತ್ತಿದ್ದರು.

 

ಯಾರಿಗೂ ಸಿಗದೇ ಮಾಯಾಜಿಂಕೆಯಂತೆ ಚಂಗನೆ ಜಿಗಿದಾಡುತ್ತಿದ್ದ ಈ ಮಿಂಚುಳ್ಳಿ ಪ್ರೇಮಪಾಶದಲ್ಲಿ ಸಿಲುಕಿ ಎಂಟು ವರ್ಷಗಳೇ ಆಗಿತ್ತು. ಈಗ ಆ ಪ್ರೀತಿಗೆ ಮದುವೆಯ ರುಜು.  ಜೆನಿಲಿಯಾ ಪ್ರೇಮಪಾಶಕ್ಕೆ ಸಿಕ್ಕ ಅದೃಷ್ಟವಂತ ರಿತೇಶ್ ದೇಶ್‌ಮುಖ್. ಸಹಜವಾದ ಹಾಸ್ಯಪ್ರಜ್ಞೆ ಇರುವ ದೇಶ್‌ಮುಖ್ ಮಾತಿಗೆ ಮರುಳಾದವರ ದಂಡೇ ಚಿತ್ರೋದ್ಯಮದಲ್ಲಿದೆ.2003ರಲ್ಲಿ `ತುಝೆ ಮೇರಿ ಕಸಮ್~ನಲ್ಲಿ ನಟಿಸಿದ ಜೋಡಿ ಈಗ ಮದುವೆಯಾಗುತ್ತಿದೆ. ಅಪ್ಪ ವಿಲಾಸ್‌ರಾವ್ ದೇಶ್‌ಮುಖ್ ರಾಜಕೀಯದಲ್ಲಿ ಸಾಗಿದರೆ, ಮಗ ಬಣ್ಣದ ಗೀಳಿಗೆ ಬಿದ್ದರು. `ಸನಮ್ ತೇರಿ ಕಸಮ್~ನಲ್ಲಿ ಜನರ ಮೊಗದಲ್ಲಿ ನಗು ಮೂಡಿಸಿ ಕಾಮಿಡಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಸಪೂರ ದೇಹದ ಜೆನಿಲಿಯಾ ಹೂನಗೆಗೆ ಇನ್ನಿಲ್ಲದ ಬೇಡಿಕೆ. `ಬಾಯ್ಸ~ ಚಿತ್ರದ ಮೂಲಕ ಗಮನ ಸೆಳೆದ ಅವರು ತೆಲುಗು. ಹಿಂದಿ, ಕನ್ನಡ, ತಮಿಳು, ಮಲೆಯಾಳಂನಲ್ಲೂ ಛಾಪು ಮೂಡಿಸಿದ್ದಾರೆ.`ಲೈಫ್ ಸೆಟಲ್ ಆಯ್ತು. ಇನ್ನು ಉಳಿದಿರುವುದು ಮದುವೆ. ಜಾನ್ ಅಬ್ರಹಾಂ ಜೊತೆ ಮದುವೆಯಾಯ್ತು ಎಂಬ ಗಾಸಿಪ್‌ನ ಹೊಗೆ ಎದ್ದು ತಣ್ಣಾಗಾಯಿತು. ಆದರೆ ಈ ಬೆಡಗಿಯ ಎಂಟು ವರ್ಷದ ಪ್ರೇಮ ಕತೆಯ ನಾಯಕ ರಿತೇಶ್. ನಾಳೆ (ಫೆಬ್ರುವರಿ 3) ರಿತೇಶ್- ಜೆನಿಲಿಯಾ ಸಪ್ತಪದಿ ತುಳಿಯ ಲಿದ್ದಾರೆ. ಇಷ್ಟು ದಿನ ಗುಟ್ಟು ಮಾಡಿದ್ದ ಸುದ್ದಿ ಈಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ,  ಅಪ್ಸರಾ ಪ್ರಶಸ್ತಿಯ `ಬ್ಯಾಂಡ್ ಬಾಜಾ ಬಾರಾತ್~ ಕಾರ್ಯಕ್ರಮದ ಮೂಲಕ ತಮ್ಮ ಮುಚ್ಚಿಟ್ಟ ಪ್ರೀತಿಯನ್ನು ಜಗಜ್ಜಾಹೀರುಗೊಳಿಸಿದರು.ಜೆನಿಲಿಯಾ ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಾರಂತೆ. ಮರಾಠಿ ಕುಟುಂಬದ ರಿತೇಶ್‌ಗೆ ಅವರದೇ ಸಮುದಾಯದ ಹುಡುಗಿಯನ್ನು ಮದುವೆಯಾಗು ಎಂದು ಕುಟುಂಬದವರು ಒತ್ತಾಯ ಮಾಡಿದರೂ ತನ್ನ ಪ್ರೀತಿಯನ್ನು ತೊರೆಯದೇ ಜೆನಿಲಿಯಾ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry