ಮದುವೆಯಾಗ್ತಿನಿ...ಸಲ್ಲು

7

ಮದುವೆಯಾಗ್ತಿನಿ...ಸಲ್ಲು

Published:
Updated:

ನವದೆಹಲಿ (ಪಿಟಿಐ):  ಸಾಕು , ಸಾಕಪ್ಪ..!? ಈ ಬ್ರಹ್ಮಚರ್ಯ ಬದುಕು, ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಬಾಲಿವುಡ್‌ನ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್  ಭಾನುವಾರ ಪ್ರಕಟಿಸಿದ್ದಾರೆ.ಜೋಧ್‌ಪುರ ಮತ್ತು ಮುಂಬೈ ಕೋರ್ಟ್ ತೀರ್ಪಿನ ಬಳಿಕ ಮದುವೆಯಾಗುವುದಾಗಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ತಿಳಿಸಿದ್ದಾರೆ.ಜೋಧ್‌ಪುರ ಕೋರ್ಟ್‌ನಲ್ಲಿ ಜಿಂಕೆ ಹತ್ಯೆ ಮತ್ತು ಮುಂಬೈ ಕೋರ್ಟ್‌ನಲ್ಲಿ ಅಪಘಾತ ಪ್ರಕರಣದ ತೀರ್ಪು ಬರಬೇಕಿದೆ. ಈ ತೀರ್ಪಿನ ಬಳಿಕ ವಿವಾಹವಾಗುವುದಾಗಿ 46ರ ಹರೆಯದ ಸಲ್ಲು ತಿಳಿಸಿದ್ದಾರೆ. ಆದರೆ ವಧುವಿನ ಬಗ್ಗೆ ಮಾಹಿತಿ ನೀಡಲು ಸಲ್ಲು ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry