ಶುಕ್ರವಾರ, ಡಿಸೆಂಬರ್ 6, 2019
19 °C

ಮದುವೆ ಕನಸಲ್ಲಿ ಅವಿವಾಹಿತ ಜಾನ್

Published:
Updated:
ಮದುವೆ ಕನಸಲ್ಲಿ ಅವಿವಾಹಿತ ಜಾನ್

ಜಾನ್ ಅಬ್ರಹಾಂ ಈಗ ಒಂಟಿಯಲ್ಲ ಎಂಬ ಗುಸುಗುಸು ಶುರುವಾದದ್ದೇ, ನಟ ಎಚ್ಚೆತ್ತುಕೊಂಡಿದ್ದಾರೆ. `ನಾನೀಗಲೂ ಒಂಟಿ. ನನ್ನವಳಿಗಾಗಿ ಕಾಯುತ್ತಿದ್ದೇನೆ~ ಎಂದು ಅವರು ಸಂದೇಶ ರವಾನಿಸಿದ್ದಾರೆ. ತಮಗಿನ್ನೂ ಮದುವೆಯಾಗಿಲ್ಲ ಎಂಬ ಸ್ಪಷ್ಟನೆಯನ್ನು ಕೂಡ ಅವರು ನೀಡಿರುವುದು ಅಚ್ಚರಿ. ಬಿಪಾಶಾ ಬಸು ಜೊತೆಗಿನ ಬೆಸುಗೆಯ ಕೊಂಡಿ ಕಳಚಿದ ನಂತರ ಲಾಸ್‌ಏಂಜಲೀಸ್‌ನ ಬ್ಯಾಂಕರ್ ಪ್ರಿಯಾ ರುಂಚಲ್‌ನೊಂದಿಗೆ ಸುತ್ತಾಡುತ್ತಿದ್ದ ಜಾನ್ ಕುರಿತು ಆಗಲೇ ಮಾತಿನ ಪುಗ್ಗೆ ಹಾರಲಾರಂಭಿಸಿತ್ತು. ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಜಾನ್ ನಿಕಟವರ್ತಿಯೊಬ್ಬರು ಹೇಳಿದ್ದರು. ಈಗ ಜಾನ್ ಕೂಡ `ಸದ್ಯದಲ್ಲಿಯೇ ಮದುವೆಯಾಗಲಿದ್ದೇನೆ~ ಎಂದಷ್ಟೇ ಹೇಳಿದ್ದಾರೆ. ಯಾರು ಆ ಹುಡುಗಿ ಎಂಬುದು ಮಾತ್ರ ಗುಟ್ಟು. `ಮೊದಲು ಮದುವೆಯಲ್ಲಿ ನಂಬಿಕೆಯಿರಲಿಲ್ಲ. ಆದರೆ ಈಗ ಬದುಕಿನಲ್ಲಿ ಆದಷ್ಟು ಬೇಗ ಸೆಟ್ಲ್ ಆಗಬೇಕು ಎಂದು ಬಯಸಿದ್ದೇನೆ. ವಯಸ್ಸಿನೊಂದಿಗೆ ನಮ್ಮ ನಂಬಿಕೆಗಳೂ ಬದಲಾಗುತ್ತವೆ ಅಲ್ಲವೇ~ ಎಂಬುದು ಜಾನ್ ಪ್ರಶ್ನೆ.

ಪ್ರತಿಕ್ರಿಯಿಸಿ (+)