ಶನಿವಾರ, ಮೇ 15, 2021
26 °C

ಮದುವೆ ಸಮಾರಂಭದಲ್ಲಿ ಪಲ್ಸ್ ಪೋಲಿಯೊ ಹನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮ ಚುರುಕಿನಿಂದ ನಡೆಯಿತು.

ಸುಡು ಬಿಸಿಲಿನ ನಡುವೆಯೂ ಸ್ವಯಂಸೇವಕರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸಂಘ ಸಂಸ್ಥೆ ಪದಾಧಿಕಾರಿಗಳು ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದರು.ನಗರದಲ್ಲಿ ಭಾನುವಾರ ಮದುವೆ ಸಮಾರಂಭಗಳು ಹೆಚ್ಚು ಇದ್ದುದರಿಂದ ಅಲ್ಲಿಗೂ ತೆರಳಿದ ಸ್ವಯಂ ಸೇವಕರು ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಪೋಲಿಯೊ ಹನಿಯನ್ನು ಹಾಕಿದರು.ಮದುವೆ ಸಮಾರಂಭದಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ `ಪ್ರಜಾವಾಣಿ~ಗೆ ತಿಳಿಸಿದರು.ಉದ್ಘಾಟನೆ: ಜಿಲ್ಲೆಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಅವರು ನಗರದ ಕೆ.ಇ.ಬಿ ಶಾಲೆ ಆವರಣದಲ್ಲಿ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ನಾಯಕ ಅವರು, ಜಿಲ್ಲೆಯಲ್ಲಿ ಇಡೀ ದಿನ 2,88,046 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವಗುರಿ ಹೊಂದಲಾಗಿದ್ದು, 3, 50, 308 ಮನೆ ತಲುಪುವ ಗುರಿ ಇದೆ. 1,112 ಬೂತ್ ರೂಪಿಸಲಾಗಿದ್ದು, 2,402 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.ಶಾಸಕ ಸಯ್ಯದ್ ಯಾಸಿನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್, ತ್ರಿವಿಕ್ರಮ ಜೋಶಿ, ಚಂದ್ರಕಾಂತ ವಕೀಲ, ಶ್ರೀನಿವಾಸ ರಾಯಚೂರಕರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.