ಮದ್ದೂರಮ್ಮಜಾನುವಾರು ಜಾತ್ರೆ ಆರಂಭ

7

ಮದ್ದೂರಮ್ಮಜಾನುವಾರು ಜಾತ್ರೆ ಆರಂಭ

Published:
Updated:
ಮದ್ದೂರಮ್ಮಜಾನುವಾರು ಜಾತ್ರೆ ಆರಂಭ

ಮದ್ದೂರು: ಬಿಸಿಲ ಬೇಗೆಯ ನಡುವೆ ಪಟ್ಟಣದಲ್ಲಿ ಮದ್ದೂರಮ್ಮ ಜಾನು ವಾರುಗಳ ಜಾತ್ರೆ ಬುಧವಾರದಿಂದ ಆರಂಭಗೊಂಡಿದೆ. ಜಾನುವಾರು ಜಾತ್ರೆಗೆ ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆ ಉದ್ಭವಿಸಿದೆ. ಇರುವ ಸ್ಥಳಾವಕಾಶದ ನಡುವೆ ನೆರಳು ಇರುವ ಸ್ಥಳಗಳಲ್ಲಿ ರೈತರು ತಮ್ಮ ದನಗಳನ್ನು ಕಟ್ಟಿದ್ದು, ದನಗಳ ಮಾರಾಟ ಹಾಗೂ ಖರೀದಿ ಆರಂಭ ಗೊಂಡಿದೆ.ಪಟ್ಟಣದ ಟಿ.ಬಿ.ವೃತ್ತ, ಪೇಟೆ ಬೀದಿಯ ಇಕ್ಕೆಲ ಸೇರಿದಂತೆ ಮೈಸೂರು ಬೆಂಗಳೂರು ಹೆದ್ದಾರಿ ಬದಿ ಯಲ್ಲಿ ರೈತರು ಎಂದಿನ ಉತ್ಸಾಹದಲ್ಲಿ ತಮ್ಮ ಜಾನುವಾರುಗಳನ್ನು ಕಟ್ಟಿದ್ದಾರೆ. ಉಳ್ಳವರು ಶಾಮಿಯಾನ ಹಾಕಿಸಿ ್ದದಾರೆ. ಆದರೆ ಬಡ ರೈತರು ತಮ್ಮ ಬಳಿ ಇದ್ದ ಗೋಣಿ ಚೀಲವನ್ನೇ ನೆರಳಿಗೆ ಬಳಸಿಕೊಂಡಿದ್ದಾರೆ.ಕುಡಿಯುವ ನೀರಿಗೆ ಪಟ್ಟಣದಲ್ಲಿ ಹಾಹಾಕಾರ ಉಂಟಾಗಿದ್ದು, ರೈತರು ಬಿಸಿಲ ಜಳಕ್ಕೆ ಬಳಲಿದ್ದಾರೆ. ಪಟ್ಟಣದ ಕೆಲವೆಡೆ ಇರುವ ಬೋರ್‌ವೆಲ್‌ಗಳನ್ನು ಆಶ್ರಯಿಸಿರುವ ರೈತರು, ನೀರಿಗಾಗಿ ಪರದಾಟ ನಡೆಸುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.ಹಲವು ಸಮಸ್ಯೆಗಳ ನಡುವೆ ಆರಂಭಗೊಂಡಿರುವ ಜಾತ್ರೆ ಕೇವಲ ಒಂದು ವಾರ ನಡೆಯುವ ಸಾಧ್ಯತೆ ಕಂಡು ಬಂದಿದ್ದು, ಅಷ್ಟರಲ್ಲಿಯೇ ಖರೀದಿ ಮತ್ತು ಮಾರಾಟ ನಡೆಯಲಿದೆ.

ತಾಲ್ಲೂಕು ಆಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಜಾತ್ರೆಗೆ ಬಂದ ರೈತರ ಮನವಿಯಾಗಿದೆ.ಉಗ್ರನರಸಿಂಹಸ್ವಾಮಿ ರಥೋತ್ಸವ

ಮದ್ದೂರು: ಪಟ್ಟಣದ ಉಗ್ರ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಇದೇ ಏ.24ರಂದು ನಡೆಯಲಿದ್ದು, ರಥೋತ್ಸವಕ್ಕೆ ಭರದ ಸಿದ್ಧತೆ ಜರುಗಿದೆ. ಏ. 17ರಂದು ಅಂಕುರಾರ್ಪಣಾ ಕಾರ್ಯಕ್ರಮ, ಏ.18ರಂದು ಧ್ವಜಾ ರೋಹಣ ಮತ್ತು ಬೇರಿತಾಡನ ಉತ್ಸವ ನಡೆಯಲಿದೆ. ಏ.19ರಂದು ಮಂಟಪೋತ್ಸವ ಮತ್ತು ಬಲಿ ಚೆಲುವರ ಉತ್ಸವ, ಚಿಕ್ಕಗರುಡೋ ತ್ಸವ, ಹಂಸವಾಹನ ಉತ್ಸವ ನಡೆಯಲಿದೆ.ಏ. 20ರಂದು ಮಂಟಪೋತ್ಸವ, ಶೇಷವಾಹನ ಉತ್ಸವ, ಏ. 21ರಂದು ಕಲ್ಯಾಣೋತ್ಸವ, ಏ.22ರಂದು ಪ್ರಹ್ಲಾದ ಪರಿಪಾಲನೋತ್ಸವ, ಏ.23ರಂದು ಪ್ರಕಾರೋತ್ಸವ, ವಸಂತೋತ್ಸವ, ಗಜೇಂದ್ರಮೋಕ್ಷ ನಡೆಯಲಿದೆ.ಅಲ್ಲದೇ ಏ. 24ರಂದು ಬ್ರಹ್ಮ ರಥೋತ್ಸವ, ಏ.25ರಂದು ಕೀಲು ಕುದುರೆ ಉತ್ಸವ, ಶಯನೋತ್ಸವ, ಏ.26ರಂದು ಸಂದಾನ ಸೇವೆ, ತೀರ್ಥಸ್ನಾನ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.ಏ. 27ರಂದು ಮಹಾಭಿಷೇಕ, ದ್ವಾದಶಾ ರಾಧನೆ, ಹನುಮಂತೋ ತ್ಸವ, ಸೇತುಸೇವೆ, ಏ.28ರಂದು ವಯಾಲ್ ಮಾಳಿಗೆ ಉತ್ಸವ, ಮೆ.1ರಂದು ವೈರಮುಡಿ ಉತ್ಸವ ದೊಂದಿಗೆ ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry