ಮದ್ದೂರು: ಕೂಲಿ ಕಾರ್ಮಿಕರ ಧರಣಿ

7

ಮದ್ದೂರು: ಕೂಲಿ ಕಾರ್ಮಿಕರ ಧರಣಿ

Published:
Updated:

ಮದ್ದೂರು: ಸಮೀಪದ ಚಾಮನಹಳ್ಳಿಯಲ್ಲಿ ಭಾರತ ಆಹಾರ ನಿಗಮವು ಕಳೆದ 11 ತಿಂಗಳಿಂದ ಕೂಲಿ ಕಾರ್ಮಿಕರಿಗೆ ಕೆಲಸ ಹಾಗೂ ಕೂಲಿ ನೀಡದಿ ರುವುದನ್ನು ಖಂಡಿಸಿ ಗುರುವಾರ ಕೂಲಿ ಕಾರ್ಮಿಕರು ನಿಗಮದ ಗೋದಾಮಿನ ಎದುರು ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಆರಂಭಿಸಿದರು.ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರ ಬೇಡಿಕೆಗೆ ನಿಗಮದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ, ಅಧಿಕಾರಿಗಳ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಬೇಡಿಕೆ ಈಡೇರು ವವರೆಗೂ ಧರಣಿ ಹಿಂಪಡೆಯವುದಿಲ್ಲ ಎಂದೂ ಘೋಷಿಸಿದರು.ಎಪಿಎಂಸಿ ಮಾಜಿ ನಿರ್ದೇಶಕ ಚಾಮನಹಳ್ಳಿ ರವಿ ಅವರು ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಎಫ್‌ಸಿಐ ಹೊರ ಗುತ್ತಿಗೆ ಆಧಾರದ ಮೇಲೆ 95 ಕಾರ್ಮಿಕರನ್ನು ನೇಮಿಸಿದ್ದು, ದಿನಗೂಲಿ ನೀಡಲಾಗು ತ್ತಿತ್ತು. 2011 ಮಾರ್ಚ್‌ನಿಂದ ಹೊರ ಗುತ್ತಿಗೆಯನ್ನೂ ರದ್ದುಗೊಳಿಸಲಾಗಿದೆ ಎಂದು ದೂರಿದರು.ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸವಾಗಲಿ, ಇಲ್ಲವೇ ಕೂಲಿಯನ್ನಾಗಲಿ ನೀಡಿಲ್ಲ. ಹೀಗಾಗಿ ಕಳೆದ 11 ತಿಂಗಳಿಂದ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರಿ ಸ್ವಾಮ್ಯದ ಎಫ್‌ಸಿಐ ಈ ಕೂಡಲೇ ಕೂಲಿ ಕಾರ್ಮಿಕರ ಬದುಕಿಗೆ ಯಾವುದಾದರೂ ಮಾರ್ಗದ ಮೂಲಕ ಆಸರೆಯಾಗಬೇಕಿದೆ ಎಂದು ಆಗ್ರಹಪಡಿಸಿದರು.ಜಿಲ್ಲೆಯವರೇ ಆಗಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಸಂಸದ ಚೆಲುವರಾಯಸ್ವಾಮಿ ಹಾಗೂ ಸ್ಥಳೀಯ ಶಾಸಕರು ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಕೂಲಿ ಕಾರ್ಮಿಕರ ಸಂಘದ ಪ್ರತಿನಿಧಿಗಳಾದ ತಂಗವೇಲು, ಆನಂದನ್, ಕುಪ್ಪುಸ್ವಾಮಿ ಸೇರಿದಂತೆ ಎಲ್ಲಾ 95 ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry