ಮಂಗಳವಾರ, ಮೇ 17, 2022
27 °C

ಮದ್ದೂರು ತಾಪಂ: ಜೆಡಿಎಸ್-ಬಿಜೆಪಿ ದೋಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಗಿ ಜೆಡಿಎಸ್‌ನ ಚೌಡಮ್ಮ ಹಾಗೂ  ಉಪಾ ಧ್ಯಕ್ಷರಾಗಿ ಸಿದ್ದಪ್ಪ ಗುರುವಾರ ಚುನಾಯಿತ ರಾದರು. ತಾಲ್ಲೂಕು ಪಂಚಾಯಿತಿಗೆ ನಡೆದ ಚುನಾ ವಣೆಯಲ್ಲಿ ಜೆಡಿಎಸ್‌ನ ಚೌಡಮ್ಮ ಹೊರತು ಪಡಿಸಿದಂತೆ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಆಯಿತು. ಉಪಾಧ್ಯಕ್ಷ ಸ್ಥಾನಕ್ಕೆ  ಜೆಡಿಎಸ್‌ನ ಸಿದ್ದಪ್ಪ, ಕಾಂಗ್ರೆಸ್‌ನ ರಾಮಚಂದ್ರ, ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.



ಅಂತಿಮವಾಗಿ ಪ್ರಕಾಶ್ ನಾಮಪತ್ರ ಹಿಂಪಡೆದರು. ಜೆಡಿಎಸ್‌ನ ಸಿದ್ದಪ್ಪ 14 ಮತ ಪಡೆದು ಜಯಗಳಿಸಿದರೆ, ಕಾಂಗ್ರೆಸ್‌ನ ರಾಮಚಂದ್ರ 13 ಮತ ಪಡೆದು ಪರಾಭವಗೊಂಡರು. ಜೆಡಿಎಸ್ 11, ಬಿಜೆಪಿ 3, ಕಾಂಗ್ರೆಸ್ 13 ಸಂಖ್ಯಾಬಲವನ್ನು ಹೊಂದಿದೆ. ಶಾಸಕಿ ಕಲ್ಪನ ಸಿದ್ದರಾಜು ಮಾತ ನಾಡಿ, ‘ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರ ನಿರ್ದೇಶನದಂತೆ    ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.



ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಮಾತನಾಡಿ, ‘ಬಿಜೆಪಿ ಯಾವುದೇ ಷರತ್ತು ವಿಧಿಸದೇ  ಜೆಡಿಎಸ್‌ಗೆ ಬೆಂಬಲ ಸೂಚಿಸಿರು ವುದು ಸ್ವಾಗತಾರ್ಹ. ಪೂರ್ಣ ಅವಧಿಗೆ ಜೆಡಿಎಸ್ ಅಧಿಕಾರ ನಡೆಸಲಿದೆ’  ಎಂದರು.



ಚುನಾವಣಾಧಿಕಾರಿ ಎ.ಸಿ.ರಂಗಪ್ಪ, ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖ ರಯ್ಯ, ಜಿಪಂ  ಸದಸ್ಯರಾದ ಕೆ.ರವಿ, ಕಂಠಿ ಸುರೇಶ್, ಲಲಿತಾ ಪ್ರಕಾಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಜ್ಜಹಳ್ಳಿ  ರಾಮಕೃಷ್ಣ, ಕಾರ್ಯಾಧ್ಯಕ್ಷ ವೆಂಕಟೇಶ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಜೆಡಿಎಸ್-ಬಿಜೆಪಿ ಮೈತ್ರಿ: ಕಿಡಿ 



ಅಧಿಕಾರ ಹಿಡಿಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಮಾಜಿ ಶಾಸಕ ಮಧು ಜಿ.ಮಾದೇಗೌಡ ಗುರುವಾರ ಕಿಡಿಕಾರಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಜೆಪಿ ವಿರುದ್ಧ  ಪ್ರತಿ ದಿನ ಕಿಡಿ ಕಾರುತ್ತಾರೆ. ಆದರೆ ಇಲ್ಲಿನ ಜೆಡಿಎಸ್ ಶಾಸಕರು ಬಿಜೆಪಿಯೊಂದಿಗೆ ಮೈತ್ರಿ  ಮಾಡಿಕೊಳ್ಳುತ್ತಾರೆ. ಇಂತಹ ಅಪವಿತ್ರ ಮೈತ್ರಿ ಹೆಚ್ಚು ದಿನ ಬಾಳುವುದಿಲ್ಲ ಎಂದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ತಾಪಂ  ಸದಸ್ಯರಾದ ಕೆ.ಆರ್.ಮಹೇಶ್, ಪ್ರಕಾಶ್, ಸುನಂದಮ್ಮ, ಸಂದರ್ಶ, ಗೀತಾ, ರಾಮಚಂದ್ರು ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.