ಮದ್ಯದ ಅಮಲು: ಮೈಮರೆತ ಶಿಕ್ಷಕ

7

ಮದ್ಯದ ಅಮಲು: ಮೈಮರೆತ ಶಿಕ್ಷಕ

Published:
Updated:

ಜಾಲಹಳ್ಳಿ: ಇಲ್ಲಿಗೆ ಸಮೀಪದ ಬುಂಕಲದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಲ್ಲಪ್ಪ ಬಂಕಲಗಿ ಪ್ರತಿನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದು ಈತನಿಗೆ ಯಾರ ಭಯವು ಇಲ್ಲದಂತಾಗಿದೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸುಭಾಷ ಪಾಟೀಲ ಆರೋಪಿಸಿದ್ದಾರೆ.ಮಂಗಳವಾರ ಈ ಶಾಲೆಯ ಸಹ ಶಿಕ್ಷಕ ಕುಡಿದು ಶಾಲೆಯ ಆವರಣದಲ್ಲಿ ಬಿದ್ದಿರುವುದು ಕಂಡುಬಂತು.

ಕುಡಿದ ನಶೆನಲ್ಲಿ ಶಾಲೆಗೆ ಬರಬೇಡ ಎಂದು ಮುಖ್ಯ ಗುರುಗಳು ಹೇಳಿದರೆ ಬಾಯಿಗೆ ಬಂದಂತೆ ಅವ್ಯಾಚ ಶಬ್ದಗಳಿಂದ ಬೈಯುತ್ತಾನೆ.ಈ ಬಗ್ಗೆ ಶಿಕ್ಷಣಾ ಇಲಾಖೆಯ  ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಈ ಶಿಕ್ಷಕ ತನ್ನ ಚಾಳಿ ಬೀಡುತ್ತಿಲ್ಲಾ ಎಂದು ಶಿಕ್ಷಕ ವರ್ಗ ಅಸಮಾಧಾನ ವ್ಯಕ್ತಪಡಿಸಿತು.ಮದ್ಯ ಸೇವಿಸಿ ಶಾಲೆಗೆ ಬರುವ ಸಹ ಶಿಕ್ಷಕ ಮಲ್ಲಪ್ಪನವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಸುಭಾಷ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಪ ನಿರ್ದೇಶಕರಿಗೆ ನೀಡಿದ ಲಿಖಿತ ದೂರಿನಲ್ಲಿ ಎಚ್ಚರಿಸಿದ್ದಾರೆ.ಶಿಕ್ಷಕ ತನ್ನ ವಿರುದ್ಧ ದೂರು ನೀಡಿದರೆ ದೂರು ಕೊಟ್ಟವರ ಹೆಸರಿನಲ್ಲಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಾನೆ ಇದರಿಂದ ಶಿಕ್ಷಕ ಹಾಗೂ ಗ್ರಾಮಸ್ಥರು ಈತನ ಮೇಲೆ ಯಾರು ದೂರು ನೀಡದೆ ಇರುವುದರಿಂದ ಈತನ ವರ್ತನೆ ಮಿತಿಮೀರಿದೆ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸುಭಾಷ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry