ಶುಕ್ರವಾರ, ನವೆಂಬರ್ 22, 2019
25 °C

ಮದ್ಯ, ನಗದು ವಶ

Published:
Updated:

ಧಾರವಾಡ: ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಬಳಿ ಶನಿವಾರ ರೂ. 36,000 ಮೌಲ್ಯದ ಮದ್ಯ ವಶಪಡಿಸಿಕೊಂಡು, ನವಲಗುಂದದ ಇಬ್ಬರನ್ನು ಬಂಧಿಸಿ, ಬೈಕ್ ವಶಪಡಿಸಿಕೊಳ್ಳಲಾಗಿದೆ.ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ  ರೂ. 4.15 ಲಕ್ಷ ನಗದನ್ನು ವಶಪಡಿಸಿಕೊಂಡು, ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಇಬ್ಬರನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಳ್ಳಲಾಗಿದೆ.ದಕ್ಷಿಣ ಕನ್ನಡ: ಜಿಲ್ಲೆಯ ಪಂಜದಲ್ಲಿ ಗುತ್ತಿಗೆದಾರರೊಬ್ಬರು ಬ್ಯಾಂಕಿನಿಂದ ರೂ 5 ಲಕ್ಷ ಹಣ ಪಡೆದು ಹಿಂತಿರುಗುತ್ತಿದ್ದಾಗ ಪೊಲೀಸರು ಹಣವನ್ನು ಮುಟ್ಟುಗೋಲು ಹಾಕಿದ ಘಟನೆ  ಶನಿವಾರ ನಡೆದಿದೆ.ಎಣ್ಮೂರಿನ ಜೆಸಿಬಿ ಮಾಲೀಕ ಷಣ್ಮುಖ ಕುಮಾರ್ ಎಂಬುವವರು ಪಂಜದ ಸಿಂಡಿಕೇಟ್ ಬ್ಯಾಂಕಿನಿಂದ ರೂ 5 ಲಕ್ಷ ಪಡೆದು ಹಿಂತಿರುಗುತ್ತಿದ್ದಾಗ ಸುಬ್ರಹ್ಮಣ್ಯ ಪೊಲೀಸರು ಹಣವನ್ನು ಮುಟ್ಟುಗೋಲು ಹಾಕಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ 50 ಸಾವಿರಕ್ಕಿಂತ ಹೆಚ್ಚಿಗೆ ನಗದನ್ನು ಕೊಂಡೊಯ್ಯಲು ಅನುಮತಿ ಇಲ್ಲದೆ ಇರುವುದರಿಂದ ಹಣವನ್ನು ಮುಟ್ಟುಗೋಲು ಹಾಕಲಾಗಿದೆ. ನಗದನ್ನು ಸುಳ್ಯ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.

ಪ್ರತಿಕ್ರಿಯಿಸಿ (+)