ಮದ್ಯ ನಿಷೇಧ, ಸ್ವಚ್ಛತೆಗೆ ಆದ್ಯತೆ: ಜಿಲ್ಲಾಧಿಕಾರಿ

7
ಯಲ್ಲಮ್ಮನಗುಡ್ಡ ಜಾತ್ರೆ: ಪೂರ್ವಭಾವಿ ಸಭೆ

ಮದ್ಯ ನಿಷೇಧ, ಸ್ವಚ್ಛತೆಗೆ ಆದ್ಯತೆ: ಜಿಲ್ಲಾಧಿಕಾರಿ

Published:
Updated:

ಸವದತ್ತಿ: ಶ್ರೀಕ್ಷೇತ್ರಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವರು. ಅವರೆಲ್ಲರ ಭಕ್ತಿಗೆ ಧಕ್ಕೆ ಬರದಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡು­ವುದನ್ನು ನಿಷೇಧ ಮಾಡುವಂತೆ ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಯರಾಂ ಆದೇಶಿಸಿದರುಇಲ್ಲಿನ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಜಿಲ್ಲಾಧಿಕಾರಿ ಜಾತ್ರಾ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಈ ಹಿಂದಿನಂತೆ ತಂಪು ಪಾನೀಯ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಎಂಬ ವರದಿ­ಗಳು ಇದ್ದು, ಇದು ಪುಣ್ಯತಾಣಕ್ಕೆ ಕಳಂಕ ತರುವ ವಿಷಯವಾಗಿದೆ ಎಂದರು.ಯಲ್ಲಮ್ಮನಗುಡ್ಡಕ್ಕೆ ಬರುವ ಪ್ರತಿಯೊಂದು ವಾಹನಗಳನ್ನು ಕಡ್ಡಾ­ಯ­ವಾಗಿ ತಪಾಸಣೆ ಮಾಡಬೇಕು. ಆ ಸಂದರ್ಭದಲ್ಲಿ ಮದ್ಯ  ಸಿಕ್ಕರೆ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡ­ಲಾಗುವುದು. ಅಲ್ಲದೆ ಅಂಗಡಿಗಳಲ್ಲಿ  ಮಾರಾಟ ಮಾಡುವುದು ಕಂಡು ಬಂದರೆ ಅವರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.ಶ್ರೀಕ್ಷೇತ್ರದಲ್ಲಿರುವ ಮೂರು ನಾಕಾಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾ­ಗುವುದು ಎಂದ ಅವರು, ಕುಡಿಯುವ ನೀರು, ಬೆಳಕು ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗುವುದು. ಇಲ್ಲಿನ ಜೋಗುಳ ಭಾವಿಯಿಂದ ಯಲ್ಲ­ಮ್ಮನ­ಗುಡ್ಡದವರೆಗೆ ಬೀದಿದೀಪ ಅಳವಡಿ­ಸುವಂತೆ ಸಂಬಂಧಪಟ್ಟ ಅಧಿಕಾರಿ­ಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ತಂಪು ಪಾನೀಯ ಅಂಗಡಿಗಳ ತಪಾಸಣೆ ಮಾಡಿ, ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ. ನಿಂಬಾಳ, ತಹಶೀ­ಲ್ದಾರ್‌ ಶಿವಲಿಂಗ ಪಟ್ಟದಕಲ್ಲ ಹಾಗೂ ಪೊಲೀಸ್ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry