ಮಂಗಳವಾರ, ಜೂನ್ 15, 2021
26 °C

ಮದ್ಯ ಮಾರಾಟ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಬಿದರಹಳ್ಳಿ ಗ್ರಾಮದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ವಾರದ ಹಿಂದೆಯಷ್ಟೆ ಹೊಸನಗರದ ತಾ.ಪಂ. ಕಚೇರಿ, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎದುರು ಸ್ವ ಸಹಾಯ ಸಂಘದ ಸದಸ್ಯರು ಅಕ್ರಮ ಮದ್ಯ ಮಾರಾಟ ನಿಗ್ರಹಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರೂ ಸಹ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.ಸುಮಾರು 80 ಮನೆಗಳಿರುವ ಈ ಗ್ರಾಮದಲ್ಲಿ  ಇಬ್ಬರು ಮಹಿಳಾ ವ್ಯಾಪಾರಿಗಳೂ ಸೇರಿದಂತೆ  8-10 ಅಕ್ರಮ ಮದ್ಯ ಮಾರಾಟವು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕೃಪೆಯಲ್ಲಿ ನಡೆಯುತ್ತಿರುವುದು ಗ್ರಾಮದ ನೆಮ್ಮದಿಗೆ ಭಂಗ ತಂದಿದೆ ಎಂದು ಅವರು ಆರೋಪಿಸಿದರು.ಇದರಲ್ಲಿ ಒಬ್ಬರು ಮಹಿಳಾ ವ್ಯಾಪಾರಿಯೂ ಸೇರಿದಂತೆ ಇಬ್ಬರು ಮಾತ್ರ ತಮ್ಮ ಅನಧಿಕೃತ ಮದ್ಯ ವ್ಯಾಪಾರವನ್ನು ನಿಲ್ಲಿಸುವುದಾಗಿ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎನ್ನಲಾಗಿದೆ.ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ.ಪಿ. ರಮೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪುಟ್ಟಪ್ಪ, ಪದಾಧಿಕಾರಿಗಳಾದ ಪವಿತ್ರಾ, ಕಲಾವತಿ, ರಾಘವೇಂದ್ರ, ಗರ್ತಿಕೆರೆ ಶಂಕರಪ್ಪ, ಒಡಾಹೊಸಳ್ಳಿ ಕುಮಾರಸ್ವಾಮಿ, ಶಿವಕುಮಾರ್, ಬಂಡಿ ರಾಜೇಶ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.