ಮದ್ಯ ಮಾರಾಟ ತಡೆಗೆ ಮನವಿ

7

ಮದ್ಯ ಮಾರಾಟ ತಡೆಗೆ ಮನವಿ

Published:
Updated:

ರಾಣೆಬೆನ್ನೂರು: ತಾಲೂಕಿನ ಕೂನ ಬೇವು ಗ್ರಾಮದಲ್ಲಿ ಆಕ್ರಮವಾಗಿ ಮದ್ಯ ಮಾರಾಟ ಬಂದ್ ಮಾಡಬೇಕು, ಮಾರಾಟ ಮಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಗ್ರಾಮದ ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರು ಗ್ರಾಮದಲ್ಲಿ ಕಿರಾಣಿ ಅಂಗಡಿ, ಚಹದಂಗಡಿಯಲ್ಲಿ ಸರಳವಾಗಿ ಸಿಗುತ್ತಿರುವ ಮದ್ಯದ ಚಟಕ್ಕೆ ಯುವಕರು ಬಲಿಯಾಗುತ್ತಿದ್ದು, ಇದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾ ಗುವುದರಿಂದ ತಕ್ಷಣ ಅಕ್ರಮ ಮದ್ಯ ಮಾರಾಟಗಾರರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಯಲ್ಲಿ ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಬಿ.ಎಂ.ಜಯದೇವ, ಹನುಮವ್ವ ತಳವಾರ, ಶಾಂತವ್ವ ಹಲವಾಗಲ, ಕಮಲವ್ವ ಕಂಬಳಿ, ಹಿರಿಯವ್ವ ಕೊರವರ, ದುರು ಗವ್ವ ಹರಿಜನ, ರುಕ್ಮವ್ವ ಲಮಾಣಿ, ಲಕ್ಕಪ್ಪ ಅಣಜಿ, ಮಾಲತೇಶ ಮಾಸ ಣಗಿ, ಮೈಲಾರಪ್ಪ ಮಾಳಗುಡ್ಡಪ್ಪ ನವರ, ಗುತ್ತೆಪ್ಪ ಗುಡಿಹಿಂದ್ಲರ, ತಮ್ಮಣ್ಣ ಅಣಜಿ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry