ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

ಮಂಗಳವಾರ, ಜೂಲೈ 16, 2019
28 °C

ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

Published:
Updated:

ಮಳವಳ್ಳಿ: ಗ್ರಾಮಗಳಲ್ಲಿರುವ ಎಲ್ಲಾ  ಅಂಗಡಿ ಹಾಗೂ ಕೆಲವು ಮನೆಗಳಲ್ಲೂ ಅನಧಿಕೃತವಾಗಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಲಂಬಾಣಿ ಹೊಸದೊಡ್ಡಿ, ದಾಳನಕಟ್ಟೆ, ಬೋರೇಗೌಡನದೊಡ್ಡಿಯ ಮಹಿಳೆಯರು ಸೋಮವಾರ ಪಟ್ಟಣದ ಅಬಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.ಈ ಭಾಗದ ಗ್ರಾಮಗಳಲ್ಲಿ ಕೂಲಿಮಾಡುವವರೇ ಹೆಚ್ಚಾಗಿದ್ದು. ಪುರುಷರು ನಿತ್ಯ ಕೂಲಿ ಹಣವನ್ನು ಮದ್ಯಕ್ಕೆ ವ್ಯಯ ಮಾಡಿ ಮಹಿಳೆಯರ ದೌರ್ಜನ್ಯ ನಡೆಸುತ್ತಿದ್ದಾರೆ. ಗ್ರಾಮಗಳಲ್ಲಿರುವ  ಅಂಗಡಿಗಳಲ್ಲಿ, ಕೆಲವು ಮನೆಗಳಲ್ಲೂ ಅನಧಿಕೃತವಾಗಿ ಮದ್ಯ ಮಾರುತ್ತಿದ್ದು ಕೂಡಲೇ ಇದನ್ನು ನಿಲ್ಲಿಸಬೇಕು.

 

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿಪತ್ರ ಸಲ್ಲಿಸಿದರು.ಲಕ್ಷ್ಮಿಬಾಯಿ, ನಾಗಮ್ಮ, ಗೋವಿಂದನಾಯ್ಕ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry