ಬುಧವಾರ, ಜೂನ್ 16, 2021
21 °C

ಮದ್ಯ ಸೇವನೆ: ಪೈಲಟ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಮಾನ ಚಾಲನೆಗೆ ಮೊದಲು ಮದ್ಯ ಸೇವಿಸಿ ಸಿಕ್ಕಿಬಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹಿರಿಯ ಪೈಲಟ್ ಜೋಸೆಫ್ ಎಂಬುವವರನ್ನು ಮೂರು ವರ್ಷಗಳ ಕಾಲ ಸೇವೆಯಿಂದ ಅಮಾನುತುಗೊಳಿಸಲಾಗಿದೆ.ಫೆಬ್ರುವರಿ 3ರಂದು ಚೆನ್ನೈನಲ್ಲಿ ಈ ಘಟನೆ ನಡೆದಿತ್ತು.  ಜೋಸೆಫ್ ಚೆನ್ನೈನಲ್ಲಿ ಏರ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದರು.ಚಾಲನಾ ಪೂರ್ವ ವೈದ್ಯಕೀಯ ಪರೀಕ್ಷೆಯಲ್ಲಿ ಪೈಲಟ್ ಜೋಸೆಫ್ `ಮದ್ಯ ಸೇವಿಸಿದ್ದಾರೆಂದು ದೃಢಪಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್ ಜೋಸೆಫ್ ಕುರಿತು `ನ್ಯಾಷನಲ್ ಕ್ಯಾರಿಯರ್~ ಸಂಸ್ಥೆ ನೀಡಿದ ವರದಿಯನ್ನು ಪರಿಶೀಲಿಸಿದ ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಇಂಥದ್ದೇ ಘಟನೆಗೆ ಸಂಬಂಧಿಸಿದಂತೆ ಜೋಸೆಫ್ ಅವರು ಮೂರು ತಿಂಗಳ ಹಿಂದೆ ಅಮಾನತುಗೊಂಡಿದ್ದರು.ಘಟನೆ ನಡೆಯುತ್ತಿದ್ದಂತೆ ಏರ್‌ಇಂಡಿಯಾ ಸಂಸ್ಥೆ ಅವರನ್ನು ಮೂರು ತಿಂಗಳ ಕಾಲ ರೋಸ್ಟರ್ (ಸರದಿ)ಪಟ್ಟಿಯಿಂದ ಹೊರಗಿಟ್ಟು, ನಂತರ ಮುಂದಿನ ನೋಟಿಸ್ ಬರುವವರೆಗೂ ಅವರನ್ನು ಎಲ್ಲ ಆಡಳಿತಾತ್ಮಕ ಸೇವೆಗಳಿಂದ ವಜಾಗೊಳಿಸಿದೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.