ಮದ್ಯ ಸೇವಿಸಿ ವಾಹನ ಚಲಾಯಿಸಿದ ಸೆನೆಟ್ ಸದಸ್ಯ

7

ಮದ್ಯ ಸೇವಿಸಿ ವಾಹನ ಚಲಾಯಿಸಿದ ಸೆನೆಟ್ ಸದಸ್ಯ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ರಿಪಬ್ಲಿಕನ್ ಪಕ್ಷದ ಸೆನೆಟ್‌ಸದಸ್ಯ ಮೈಕಲ್ ಕ್ರಾಪೊ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ ವರ್ಜೀನಿಯಾ ಪೊಲೀಸರು ಬಂಧಿಸಿದ್ದಾರೆ.ವಾಷಿಂಗ್ಟನ್‌ನ ಉಪ ನಗರದಲ್ಲಿ ಕ್ರಾಪೊ ಅವರ ವಾಹನವು ಕೆಂಪು ದೀಪವನ್ನು ನಿರ್ಲಕ್ಷಿಸಿ ಮುಂದೆ ಸಾಗಿದಾಗ ಪೊಲೀಸರು ತಡೆದರು. ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕ್ರಾಪೊ ಮದ್ಯಪಾನ ಮಾಡಿದ್ದು ಸಾಬೀತಾಗಿದ್ದರಿಂದ ಬಂಧಿಸಲಾಯಿತು.1000 ಡಾಲರ್‌ನ ವೈಯಕ್ತಿಕ ಭದ್ರತೆ ನಿಡಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಜ. 4ರಂದು ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry