`ಮಧುಮೇಹ ಅಪಾಯದ ಕಾಯಿಲೆ'

7

`ಮಧುಮೇಹ ಅಪಾಯದ ಕಾಯಿಲೆ'

Published:
Updated:

ಹುಮನಾಬಾದ್: ಮಧುಮೇಹ ಮೌನವಾಗಿದ್ದುಕೊಂಡೇ ಅಪಾಯ ತಂದೊಡ್ಡುವ ಕಾಯಿಲೆ ಎಂದು ಹೈದರಾಬಾದ್‌ನ ನಾರಾಯಣ ಹೃದಯಾಲಯ ಮುಖ್ಯಸ್ಥ ಡಾ.ಜಿ.ಜೆ.ಡಿ ರಾವ್ ತಿಳಿಸಿದರು. ದಿ.ರಾಮಚಂದ್ರರಾವ ಎಸ್.ಚಿದ್ರಿ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಸಂಗಪ್ಪ ಚಿದ್ರಿ ಮೆಮೋರಿಯಲ್ ಕ್ಲಿನಿಕ್ ವತಿಯಿಂದ  ಭಾನುವಾರ ಏರ್ಪಡಿಸಿದ್ದ ಉಚಿತ ಮಧುಮೇಹ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಯಿಲೆ ಪರಿಣಾಮ ದೃಷ್ಠಿ ದೋಷ, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಇತ್ಯಾದಿ ಕಾಯಿಲೆ ಹರಡುವ ಸಾಧ್ಯತೆ  ಇರುವುದರಿಂದ ಯಾರೊಬ್ಬರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಕಾಯಿಲೆ ಇಲ್ಲದಿದ್ದರೂ ದೇಹದ ಆರೋಗ್ಯ ಸಂಬಂಧ ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.ಯೋಜನಾಬದ್ಧ ಆಹಾರ ಸೇವನೆ ಇತ್ಯಾದಿ ಕೊರತೆ ಕಾರಣ ಈ ಕಾಯಿಲೆ ಹರಡುತ್ತದೆ ಎಂದರು. ಆಂಧ್ರದ  ಸಂಗಾರೆಡ್ಡಿ ಮಾರ್ಗವಾಗಿ ಸರಳವಾಗಿ ನಾರಾಯಣ ಹೃದಯಾಲಕ್ಕೆ ತಲುಪಬಹುದು. ಸದ್ಯ ಬಿ.ಪಿ.ಎಲ್ ಪಡಿತರದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎ.ಪಿ.ಎಲ್‌ನವರಿಗೆ ರೀಯಾಯ್ತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಭವಿಷ್ಯದಲ್ಲಿ ಯಶಸ್ವಿನಿ ಕಾರ್ಡ್‌ದಾರರಿಗೂ ಈ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ ಅವರು, ಪುಣ್ಯಸ್ಮರಣೆ ನಿಮಿತ್ತ ಜನಸೇವೆಗೆ ಮುಂದಾಗಿರುವ ಚಿದ್ರಿ ಪರಿವಾರ ಸೇವೆ ಮೆಚ್ಚಿವಂಥದ್ದು ಎಂದರು. ಮಧುಮೇಹ ಮೊದಲಾದ ಕಾಯಿಲೆಗೆ ಹೈಬ್ರಿಡ್ ತಳಿಯ ಆಹಾರ ಸೇವನೆ ಪ್ರಮುಖ ಕಾರಣ ಎಂದು ಸಾಹಿತಿ ಕಾಶಿನಾಥರೆಡ್ಡಿ ಹೇಳಿದರು. ಮಧ್ಯಾಹ್ನ 4ರ ವರೆಗೆ ಒಟ್ಟು 396ಜನ ತಪಾಸಣೆ ಮಾಡಿಸಿಕೊಂಡರು. ಡಾ.ಬಸವರಾಜ ರಾಯಕೋಡ, ಡಾ.ಚಂದ್ರಕಾಂತ ಖೇಡೆ, ಡಾ.ರಶ್ಮಿ ಮಂದಕನಳ್ಳಿ, ಡಾ.ರಾಹುಲ್, ಡಾ.ಸಂತೋಷ ವ್ಹಿ.ಚಿದ್ರಿ, ಡಾ.ನೀತಾ, ಡಾ.ಸಂಗಮೇಶ, ಡಾ.ಸಚ್ಚಿನ್ ಗುದಗೆ, ನಂದು ಚಿದ್ರಿ, ಸೂರ್ಯಕಾಂತ ಚಿದ್ರಿ, ಸರೋಜನಿ ಚಿದ್ರಿ, ವಸಂತಕುಮಾರ ವೇದಿಕೆಯಲ್ಲಿ ಇದ್ದರು. ದತ್ತಕುಮಾರ ಚಿದ್ರಿ ಸ್ವಾಗಸಿದರು. ಡಾ.ವಿ.ಆರ್. ಚಿದ್ರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಖೇಮು ನಿರೂಪಿಸಿದರು. ಲಕ್ಷ್ಮೀಕಾಂತ ಆರ್.ಚಿದ್ರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry