ಬುಧವಾರ, ಏಪ್ರಿಲ್ 14, 2021
24 °C

ಮಧುಮೇಹ ಜನರ ಮೇಲೆ ನಿಂಗ್ಯಾಕೆ ಈ ಮೋಹ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಾರ ನೀವೆಲ್ಲ ಗಮನಿಸಿದಂತೆ ಎಲ್ಲ ದಿನಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಅಮೆರಿಕಕ್ಕೆ ಬಂದು ಅಪ್ಪಳಿಸಿದ `ಸ್ಯಾಂಡಿ~ ಮತ್ತು ಭಾರತದ ತಮಿಳುನಾಡಿಗೆ ಬಂದು ಎರಗಿದ `ನೀಲಂ~ ಚಂಡಮಾರುತದ್ದೇ ಸಮಾಚಾರವಾಗಿತ್ತು. ಅದು ಮನುಕುಲಕ್ಕೆ ಮಾಡಿದ ಅಪಾರ ನಷ್ಟ, ಸಾವು-ನೋವುಗಳ ಲೆಕ್ಕಾಚಾರದ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಅಮೆರಿಕದ ಕೇವಲ ಒಂದು ಭಾಗಕ್ಕೆ ಮತ್ತು ಭಾರತದ ತಮಿಳುನಾಡಿನ ಒಂದು ಪ್ರದೇಶಕ್ಕೆ ಮಾತ್ರ ಚಂಡಮಾರುತ ತನ್ನ ರುದ್ರನರ್ತನ ಪ್ರದರ್ಶಿಸಿತು.ಚಂಡಮಾರುತ ಸಮುದ್ರ ತಟದ ಪ್ರದೇಶಕ್ಕೆ ಮಾತ್ರ ಅಪ್ಪಳಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ, ಮಧುಮೇಹ ಎಂಬ ರೋಗ ತನ್ನ ಕರಾಳಛಾಯೆಯನ್ನು ಇಡೀ ಪ್ರಪಂಚಕ್ಕೇ ಆವರಿಸಿದೆ ಎಂದರೆ ತಪ್ಪಾಗಲಾರದು. ಶ್ರೀಮಂತರು- ಬಡವರು, ಹಿರಿಯರು- ಕಿರಿಯರು, ಹೆಂಗಸರು- ಗಂಡಸರು ಎನ್ನುವ ಭೇದ ವಿಲ್ಲದೇ ಬಂದು ಎರಗುವಂತಹ ರೋಗವಿದು. ಹಣವಂತರ ಜೀವನ ಶೈಲಿಗೆ ಇದು ಸಮಸ್ಯೆ ತಂದೊಡ್ಡಬಹುದು, ಮಧ್ಯಮ ವರ್ಗದವರ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು, ಕೆಳವರ್ಗದ ಜನರಿಗೆ ಈ ಬಗ್ಗೆ ಹೆಚ್ಚಿನ ಅರಿವಿಲ್ಲದೆ ಅವರ ಜೀವಕ್ಕೇ ಅಪಾಯ ತರಬಹುದು. ಹೀಗೆ ಮಧುಮೇಹದಿಂದ ನರಳುವ ಪ್ರತಿಯೊಬ್ಬರಿಗೂ ತಿಳಿದೋ ತಿಳಿಯದೆಯೋ ಅವರ ಜೀವನ ಶೈಲಿಯಲ್ಲಿ ಮಾತ್ರ ವ್ಯತ್ಯಾಸ ಆಗಿಬಿಡುತ್ತದೆ.ವ್ಯಕ್ತಿಯಲ್ಲಿ ಮಧುಮೇಹದ ಲಕ್ಷಣ ಕಾಣಿಸಿಕೊಂಡಿದ್ದರೆ ಅವರಿಗೆ ತಿಂಡಿಯ ಮುಂಚೆ ಮತ್ತು ನಂತರ ಒಂದೂವರೆ ಗಂಟೆ ಬಿಟ್ಟು ರಕ್ತ ಪರೀಕ್ಷೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಮಧುಮೇಹ ಇಲ್ಲದವರಿಗೆ ತಿಂಡಿಯ ಮುಂಚೆ ರಕ್ತದಲ್ಲಿ ಗ್ಲೂಕೋಸ್ ಸುಮಾರು 70-100 ಎಂ.ಜಿ/ ಡಿ.ಎಲ್ ಮತ್ತು ತಿಂಡಿಯ ನಂತರ 100-140 ಎಂ.ಜಿ/ ಡಿ.ಎಲ್‌ನಷ್ಟು ಇರುತ್ತದೆ.ಅಕಸ್ಮಾತ್ ತಿಂಡಿಯ ಮೊದಲೇ ರಕ್ತಪರೀಕ್ಷೆಯಲ್ಲಿ 110-125 ಎಂ.ಜಿ/ ಡಿ.ಎಲ್ ಮತ್ತು ತಿಂಡಿ ನಂತರ 140- 200 ಎಂ.ಜಿ/ ಡಿ.ಎಲ್ ಗ್ಲೂಕೋಸ್ ಅಂಶ ಕಂಡುಬಂದರೆ, ಅಂತಹವರು ಮಧುಮೇಹ ಬರುವ ಹಾದಿಯಲ್ಲಿದ್ದಾರೆ ಎಂದು ವಿಂಗಡಿಸಲಾಗುತ್ತದೆ. ತಿಂಡಿಯ ಮೊದಲು ಸಕ್ಕರೆ ಅಂಶ 125 ಎಂ.ಜಿ/ ಡಿ.ಎಲ್‌ಗಿಂತ ಮೇಲಿದ್ದರೆ ಮತ್ತು ತಿಂಡಿಯ ನಂತರ 200 ಎಂ.ಜಿ/ ಡಿ.ಎಲ್‌ಗಿಂತಲೂ ಮೇಲಿದ್ದರೆ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಹೇಳಬಹುದು.`ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡು~ ಎನ್ನುವ ಗಾದೆ ಮಾತಿನ ಹಾಗೆ ಒಮ್ಮೆ ಈ ರೀತಿಯ ಫಲಿತಾಂಶ ಬಂದರೂ ಅವರನ್ನು ಮಧುಮೇಹಿಗಳು ಎಂದು ಕೂಡಲೇ ಹೇಳಿಬಿಡಲಾಗುವುದಿಲ್ಲ. ಅದಕ್ಕಾಗಿ ಒಜಿಟಿಟಿ ಮತ್ತು ಎಚ್‌ಬಿಎ,ಸಿ ಎಂಬ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಎಚ್‌ಬಿಎ,ಸಿ ಪರೀಕ್ಷೆಯಲ್ಲಿ ಶೇಕಡಾ 7ಕ್ಕಿಂತಲೂ ಹೆಚ್ಚಿಗೆ ಫಲಿತಾಂಶ ಬಂದಲ್ಲಿ, ಅವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗುತ್ತದೆ.ನಾನಾ ಬಗೆ

ನಮ್ಮ ಉದರದ ಕೆಳಗಿರುವ ಗ್ರಂಥಿಯ ಹೆಸರು ಪ್ಯಾನ್‌ಕ್ರಿಯಾಸ್. ಈ ಗ್ರಂಥಿಯಲ್ಲಿರುವ ಬೀಟಾ ಸೆಲ್ಸ್ ಎಂಬುದು ಇನ್‌ಸುಲಿನ್ ಉತ್ಪಾದಿಸುವ ಒಂದು ಭಾಗ. ಇನ್‌ಸುಲಿನ್ ಉತ್ಪಾದನೆ ಕುಂಠಿತವಾದರೆ ನಾವು ಮಧುಮೇಹದಿಂದ ನರಳುತ್ತೇವೆ. ಶೇಕಡಾ 95-100ರಷ್ಟು ಬೀಟಾ ಸೆಲ್ಸ್‌ಗಳು ನಾಶ ಹೊಂದಿದ ಪಕ್ಷದಲ್ಲಿ ಟೈಪ್-1 ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಚಿಕ್ಕ ವಯಸ್ಸಿನವರಿಗೆ (25 ವರ್ಷಕ್ಕಿಂತ ಕೆಳಗಿನ) ಬರುತ್ತದೆ.ಆರಂಭದಲ್ಲಿ ಶೇಕಡಾ 50ರಷ್ಟು ಬೀಟಾ ಸೆಲ್ಸ್ ನಾಶ ಹೊಂದಿದ್ದರೆ ಟೈಪ್-2 ಮಧುಮೇಹ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ಮಧುಮೇಹವನ್ನು ಜಿ.ಡಿ.ಎಂ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೆ ಈ್ಗ, ಈ್ಟ್ಠಜ ಞಛಿಜಿಠಿಛಿ ಜಿಚಿಛಿಠಿಛಿ ಮುಂತಾದ ಅನೇಕ ಬಗೆಯ ಮಧುಮೇಹವನ್ನು ಗುರುತಿಸಲಾಗಿದೆ.ವ್ಯತಿರಿಕ್ತ ಪರಿಣಾಮಗಳು

ಮಧುಮೇಹದ ಅನೇಕ ಅಡ್ಡ ಪರಿಣಾಮಗಳಲ್ಲಿ ಕಣ್ಣಿಗೆ ಆಗುವ ಅಪಾಯ ಮುಖ್ಯವಾದುದು. ಕಣ್ಣಿನ ತೊಂದರೆ ಸಾಮಾನ್ಯ ಜನರಿಗೆ ಆಗುವುದಕ್ಕಿಂತ ಶೇ 25ರಷ್ಟು ಹೆಚ್ಚು ಪ್ರಮಾಣದಲ್ಲಿ ಮಧುಮೇಹಿಗಳಿಗೆ ಆಗುತ್ತದೆ. ಅತಿ ಹೆಚ್ಚು ಸಕ್ಕರೆ ಅಂಶ ರಕ್ತದಲ್ಲಿರುವುದರಿಂದ ಹೃದಯಕ್ಕೂ ತೀವ್ರ ಸಮಸ್ಯೆಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಂಶ ಹೆಚ್ಚು ಶೇಖರವಾಗಿ ಹೃದಯಾಘಾತಕ್ಕೆ ಎಡೆ ಆಗಬಹುದು. ಹೀಗಾಗಿ ಮಧುಮೇಹಿಗಳು ಇತರರಿಗಿಂತ ನಾಲ್ಕು ಪಟ್ಟು ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಾರೆ.ಮೂತ್ರಕೋಶದ ಮೇಲೆ ಕೂಡ ಮಧುಮೇಹದಿಂದ ಅಪಾರ ಹಾನಿಯುಂಟಾಗುತ್ತದೆ. ರಕ್ತದೊತ್ತಡ ಮತ್ತು ಸಕ್ಕರೆ ಅಂಶ ರಕ್ತದಲ್ಲಿ ಹೆಚ್ಚಾದರೆ ಮೂತ್ರಕೋಶದ ವೈಫಲ್ಯಕ್ಕೆ ಎಡೆಮಾಡಿಕೊಡುತ್ತದೆ. ಸಾಮಾನ್ಯರಿಗಿಂತ ಮಧುಮೇಹಿಗಳಿಗೆ ಸುಮಾರು 17 ಪಟ್ಟು ಹೆಚ್ಚು ಮೂತ್ರಕೋಶದ ವೈಫಲ್ಯ ಆಗುತ್ತದೆ.ವಿಪರೀತವಾದ ಗ್ಲೂಕೋಸ್‌ನಿಂದ ರಕ್ತ ಸಂಚಾರಕ್ಕೆ ಅಡಚಣೆಯಾಗಿ ಕಾಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಇದನ್ನು `ಈಜಿಚಿಛಿಠಿಜ್ಚಿ ್ಞಛ್ಠ್ಟಿಟಠಿ~ ಎಂದು ಕರೆಯಲಾಗುತ್ತದೆ. ಕಾಲಿನಲ್ಲಿ ಆದ ಗಾಯ ವಾಸಿಯಾಗದಿದ್ದರೆ ಗ್ಯಾಂಗ್ರೀನ್ (ಕೊಳೆತು ಹೋಗುವುದು) ಆಗುತ್ತದೆ.

ಹೈಪೋಗ್ಲೈಸೀಮಿಯಾ ಅಥವಾ ಲೋ ಬ್ಲಡ್ ಶುಗರ್

ಮಧುಮೇಹದಲ್ಲಿ ಮತ್ತೊಂದು ಆಘಾತಕಾರಿಯಾದ ವ್ಯತಿರಿಕ್ತ ಪರಿಣಾಮ ಎಂದರೆ ಲೋ ಬ್ಲಡ್ ಶುಗರ್. ಅಂದರೆ ರಕ್ತದಲ್ಲಿ ಗ್ಲೂಕೋಸ್ ಅಂಶ ಯಾವುದೇ ಸಂದರ್ಭದಲ್ಲೂ 100 ಎಂ.ಜಿ/ ಡಿ.ಎಲ್‌ಗಿಂತಲೂ ಮೇಲ್ಪಟ್ಟಿರಬೇಕು. ಇದು 70 ಎಂ.ಜಿ/ ಡಿ.ಎಲ್‌ಗಿಂತ ಕೆಳಮಟ್ಟಕ್ಕೆ ಕುಸಿದರೆ ಲೋ ಬ್ಲಡ್ ಶುಗರ್ ಆಗುತ್ತದೆ. ಮೊದಲು ವಿಪರೀತ ಬೆವರು ಬರುತ್ತದೆ, ತಲೆನೋವು, ಕೈಕಾಲುಗಳು ಅದುರುವುದು, ತೀವ್ರ ಆಯಾಸ, ಕಣ್ಣು ಮಂಜಾಗುವುದು ಮುಂತಾದವು ರೋಗಿಯ ಅನುಭವಕ್ಕೆ ಬರುತ್ತವೆ. ಗ್ಲೂಕೋಸ್ ಅಂಶ 45ಕ್ಕಿಂತಲೂ ಕಡಿವೆುಯಾದರೆ ಅವರ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ತೀವ್ರ ನಿತ್ರಾಣಗೊಂಡು ಮೂರ್ಛೆ ಬೀಳಬಹುದು. ಸಕಾಲದಲ್ಲಿ ಚಿಕಿತ್ಸೆ ಮಾಡದ ಪಕ್ಷದಲ್ಲಿ ಪ್ರಾಣಕ್ಕೆ ಅಪಾಯ ಕಟ್ಟಿಟ್ಟಬುತ್ತಿ.ಸಕಾಲಕ್ಕೆ ಮಾತ್ರೆ ತೆಗೆದುಕೊಳ್ಳದಿರುವುದು, ಆಹಾರ ಸೇವಿಸದಿದ್ದರೆ ಅಥವಾ ತಡವಾದರೆ ಈ ಪರಿಸ್ಥಿತಿ ನಿರ್ಮಾಣವಾಗಬಹುದು. ಅಗತ್ಯಕ್ಕಿಂತ ಕಡಿಮೆ ಆಹಾರ ಸೇವಿಸಿದಾಗ, ಔಷಧದ ಪ್ರಮಾಣ ಹೆಚ್ಚಾಗಿದ್ದಾಗ ಅಥವಾ ಅಧಿಕ ಕೆಲಸ ಮಾಡಿದಾಗಲೂ ಇಂತಹ ಪರಿಸ್ಥಿತಿ ನಿರ್ಮಾಣ ಆಗಬಹುದು.ಚಿಕಿತ್ಸೆ: ರೋಗಿಗೆ ತನ್ನ ಲೋ ಬ್ಲಡ್ ಶುಗರ್ ಚಿಹ್ನೆಗಳ ಬಗ್ಗೆ ಅರಿವಿರಬೇಕು. ವಿಪರೀತ ಬೆವರು, ನಿತ್ರಾಣ ಆಗುತ್ತಿದ್ದಂತೆ ತಕ್ಷಣ ಸಿಹಿ ಪದಾರ್ಥ ಅಥವಾ ಆಹಾರ ಸೇವಿಸಬೇಕು. ಕುಟುಂಬದ ಸದಸ್ಯರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿರಬೇಕು. ಇನ್ನೂ ಹೆಚ್ಚು ನಿತ್ರಾಣಗೊಂಡರೆ ನೇರವಾಗಿ ಗ್ಲೂಕೋಸ್ ಸೇವಿಸಬೇಕು. ಹೀಗಾಗಿ ತಮ್ಮ ಬಳಿ ಯಾವಾಗಲೂ ಸಿಹಿ ಪದಾರ್ಥಗಳನ್ನು ಇಟ್ಟುಕೊಂಡಿದ್ದರೆ ಒಳಿತು.ಚಿಕಿತ್ಸೆ- ಗೊಂದಲ ಬೇಡ


ಮಧುಮೇಹಿಗಳಿಗೆ ಚಿಕಿತ್ಸೆಯ ಬಗ್ಗೆ ಅಪಾರ ಗೊಂದಲವಿದೆ. ಕೆಲವರು ಕೇವಲ ಆಹಾರ ಪಥ್ಯವಿದ್ದರೆ ಸಾಕು, ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಭಾವಿಸಿದರೆ, ಇನ್ನು ಕೆಲವರಲ್ಲಿ ಕೇವಲ ಔಷಧ ಅಥವಾ ವ್ಯಾಯಾಮ ಮಾಡಿದರೆ ಮಧುಮೇಹ ಸದಾಕಾಲ ನಿಯಂತ್ರಣದಲ್ಲಿರುತ್ತದೆ ಎಂಬ ನಂಬಿಕೆ ಇದೆ. ಆದರೆ ಪಥ್ಯಾಹಾರ, ವ್ಯಾಯಾಮ ಮತ್ತು ಔಷಧಗಳ ಸೇವನೆ ಎಲ್ಲವೂ ಮುಖ್ಯವಾಗುತ್ತದೆ. ದಿನಕ್ಕೆ ಕನಿಷ್ಠ 40 ನಿಮಿಷದ ನಡಿಗೆ, ಆಹಾರದಲ್ಲಿ ಸಿಹಿ ವರ್ಜಿಸುವುದು, ಇತಿಮಿತಿಯಲ್ಲಿ ಆಹಾರ ಸೇವನೆ ಮತ್ತು ವೈದ್ಯರ ಸೂಚನೆ ಮೇರೆಗೆ ಔಷಧಗಳನ್ನು ಸೇವಿಸುವುದು ಸೂಕ್ತ.ಒಟ್ಟಿನಲ್ಲಿ ಹೇಳುವುದಾದರೆ, ಈ ರೋಗವನ್ನು ನಿರ್ಲಕ್ಷಿಸಿದರೆ ಮಧುಮೇಹಿಗಳ ಜೀವನ ದುಸ್ತರವಾಗುತ್ತದೆ. ಆದರೆ ಇದರ ಬಗ್ಗೆ ಹೆಚ್ಚು ಅರಿತುಕೊಂಡು ಜಾಗೃತರಾಗಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ. ಸುಮಾರು 30-35 ವರ್ಷದಿಂದ ಮಧುಮೇಹವಿದ್ದರೂ, ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದೇ ಜೀವನದ ಸೊಬಗನ್ನು ಸವಿಯುತ್ತಿರುವವರು ಹಲವರು ಇದ್ದಾರೆ. `ಮನಸ್ಸಿದ್ದರೆ ಮಾರ್ಗ~ ಎನ್ನುವ ಹಾಗೆ ಮಧುಮೇಹದ ಬಗ್ಗೆ ಹೆಚ್ಚು ಅರಿತುಕೊಂಡರೆ, ಅದರ ಮೇಲೆ ಖಂಡಿತಾ ಜಯ ಸಾಧಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.